ಐಎನ್‍ಎಸ್ ವಿಶಾಲ್‍ಗೆ ಅಣುಶಕ್ತಿಯೇ ಇಂಧನ

ಭಾರತ ನಿರ್ಮಿಸಲುದ್ದೇಶಿಸಿರುವ ದೇಶದ ಅತಿದೊಡ್ಡ ಯುದ್ಧನೌಕೆ ಐಎನ್‍ಎಸ್ ವಿಶಾಲ್ ಅಣುಶಕ್ತಿಯಿಂದ ಮುನ್ನಡೆಯಲಿದೆ. ಸ್ವದೇಶದಲ್ಲೇ ನಿರ್ಮಾಣ...
ಐಎನ್‍ಎಸ್ ವಿಶಾಲ್‍ ಯುದ್ಧನೌಕೆ
ಐಎನ್‍ಎಸ್ ವಿಶಾಲ್‍ ಯುದ್ಧನೌಕೆ

ನವದೆಹಲಿ:ವ ಈ ಯುದ್ಧನೌಕೆಯಲ್ಲಿ 50 ಯುದ್ಧವಿಮಾನಗಳಿಗೆ ಸ್ಥಳಾವಕಾಶ ಕಲ್ಪಿಸುವ ಉದ್ದೇಶವಿದೆ ಎಂದು ``ಎನ್‍ಡಿಟಿವಿ'' ಶುಕ್ರವಾರ ವರದಿ ಮಾಡಿದೆ.
ಈ ಅಣುಚಾಲಿತ ಯುದ್ಧನೌಕೆ ನಿರ್ಮಿಸುವ ಸಂಬಂಧ ಈಗಾಗಲೇ ರಕ್ಷಣಾ ಸಚಿವಾಲಯ 9 ಭಾರತೀಯ ಹಡಗುಕಟ್ಟೆ ಗಳಿಗೆ ಪತ್ರಬರೆದಿದೆ. ಇವುಗಳಲ್ಲಿ ಕೆಲವು ಖಾಸಗಿ ಕಂಪನಿಗೆ ಸೇರಿವೆ. ಈ ಮೂಲಕ ಸಹಭಾಗಿತ್ವದ ಮೂಲಕ ಈ ಯುದ್ಧ ನೌಕೆ ಯನ್ನು ಸರಿಯಾದ ಸಮಯಕ್ಕೆ ನಿರ್ಮಿಸುವ ಉದ್ದೇಶ ಸರ್ಕಾರಕ್ಕಿದೆ. ಸದ್ಯ ಐಎನ್‍ಎಸ್ ವಿಕ್ರಮಾದಿತ್ಯ ದೇಶದ ಅತಿದೊಡ್ಡ ಯುದ್ಧ ನೌಕೆಯಾಗಿದೆ. 45 ಸಾವಿರ ಟನ್ ತೂಕದ ಈ ಯುದ್ಧ ನೌಕೆ 2013ರಿಂದ ಭಾರತೀಯ ನೌಕಾಸೇನೆಯಲ್ಲಿ ಸೇವೆ ಸಲ್ಲಿಸುತ್ತಿದೆ. ಈ ಯುದ್ಧನೌಕೆ 34 ಯುದ್ಧವಿಮಾನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಐಎನ್‍ಎಸ್ ವಿಶಾಲ್ ಅನ್ನು ಅಮೆರಿಕ ತಂತ್ರಜ್ಞಾನ ಬಳಸಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈ ವಿಚಾರವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭೇಟಿ ವೇಳೆಯೂ ಚರ್ಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com