ಪುರಿ ಜಗನ್ನಾಥ ರಥ ಯಾತ್ರೆ ಆರಂಭ

ಭಾರೀ ಭದ್ರತೆ ನಡುವೆ, ಶತಮಾನದ ಮೊದಲ ಪುರಿ ಜಗನ್ನಾಥ ದೇವರ ನಬಕಲೆಬಾರ್ ರಥ ಯಾತ್ರೆ ಶನಿವಾರ ಆರಂಭಗೊಂಡಿದೆ...
ಪುರಿ ಜಗನ್ನಾಥ ರಥ ಯಾತ್ರೆ
ಪುರಿ ಜಗನ್ನಾಥ ರಥ ಯಾತ್ರೆ

ಪುರಿ: ಭಾರೀ ಭದ್ರತೆ ನಡುವೆ, ಶತಮಾನದ ಮೊದಲ ಪುರಿ ಜಗನ್ನಾಥ ದೇವರ ನಬಕಲೆಬಾರ್ ರಥ ಯಾತ್ರೆ ಶನಿವಾರ ಆರಂಭಗೊಂಡಿದೆ.

ದೇಶದ ಮೂಲೆಮೂಲೆಗಳಿಂದ ಹಾಗೂ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಒಡಿಶ್ಶಾ ರಾಜ್ಯದ ಪುರಿಗೆ ಆಗಮಿಸಿದ್ದು 9 ದಿನಗಳ ವಾರ್ಷಿಕ ರಥ ಯಾತ್ರೆಯ ಆರಂಭವನ್ನು ಉತ್ಸಾಹ, ಶ್ರದ್ಧೆಗಳಿಂದ ವೀಕ್ಷಿಸಿದರು.

12ನೇ ಶತಮಾನದ ಜಗನ್ನಾಥ ದೇವರ ಮೂರ್ತಿ ಶೃಂಗಾರಗೊಂಡ ರಥದಲ್ಲಿ ಕುಳಿತಿರುವುದನ್ನು ಭಕ್ತರು ಕಣ್ತುಂಬಿ ಸವಿದರು.  ಜಗನ್ನಾಥ ದೇವರು, ಬಾಲಭದ್ರ ಮತ್ತು ದೇವಿ ಸುಭದ್ರ ಅವರ ಪೂಜೆಯಲ್ಲಿ ಭಕ್ತರು ಮುಳುಗಿದ್ದಾರೆ.

ಉತ್ಸವದಲ್ಲಿ ಭಾಗವಹಿಸುವ ಭಕ್ತರ ಸುರಕ್ಷತೆಗೆ ಮತ್ತು ನಿಯಂತ್ರಣಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. ಕಾಲ್ತುಳಿತದಂತಹ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಐಜಿಪಿ ಸೌಮೇಂದ್ರ ಕೆ. ಪ್ರಿಯದರ್ಶಿ ತಿಳಿಸಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಭಯೋತ್ಪಾದನಾ ನಿಗ್ರಹ ದಳ, ತುರ್ತು ಕ್ರಮ ದಳ ಹಾಗೂ ಶಾರ್ಪ್ ಶೂಟರ್ಸ್ ಅವರನ್ನು ನಿಯೋಜಿಸಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com