ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇ ನಲ್ಲಿ ಮಣ್ಣು ಕುಸಿತ; 3 ಸಾವು

ಮುಂಬೈ ಪುಣೆ ಎಕ್ಸ್‌ಪ್ರೆಸ್ ವೇಯಲ್ಲಿ ಮಣ್ಣು ಕುಸಿತದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಬಗ್ಗೆ ವರದಿಯಾಗಿದೆ. ಪ್ರಸ್ತುತ ದಾರಿಯಲ್ಲಿ...
ಮುಂಬೈ ಪುಣೆ ಎಕ್ಸ್‌ಪ್ರೆಸ್ ವೇ
ಮುಂಬೈ ಪುಣೆ ಎಕ್ಸ್‌ಪ್ರೆಸ್ ವೇ
Updated on

ಮುಂಬೈ: ಮುಂಬೈ ಪುಣೆ ಎಕ್ಸ್‌ಪ್ರೆಸ್ ವೇಯಲ್ಲಿ ಮಣ್ಣು ಕುಸಿತದ ಪರಿಣಾಮ ಭಾನುವಾರ ಬೆಳಗ್ಗೆ ಮೂವರು ಸಾವನ್ನಪ್ಪಿದ ಘಟನೆ ಬಗ್ಗೆ ವರದಿಯಾಗಿದೆ. ಪ್ರಸ್ತುತ ದಾರಿಯಲ್ಲಿ ಮಣ್ಣು ಕುಸಿದ ಕಾರಣ ಆ ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಲೋನಾವಾಲ ಬಳಿಯ ಅಧೋಶಿ ಸುರಂಗ ಬಳಿ ಮಣ್ಣು ಕುಸಿದು ಬಿದ್ದಿತ್ತು. ಎಕ್ಸ್‌ಪ್ರೆಸ್ ವೇ ಇಕ್ಕೆಲದಲ್ಲಿ ಮಣ್ಣು ಕುಸಿಯದಂತೆ ತಡೆಹಿಡಿದಿದ್ದ ಕಬ್ಬಿಣದ ರಾಡ್‌ಗಳು ಹಳತಾಗಿದ್ದರಿಂದ ಈ ರೀತಿ ಮಣ್ಣು ಕುಸಿತವುಂಟಾಗಿದೆ ಎಂದು ಹೇಳಲಾಗುತ್ತಿದೆ.

ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ನಿಷೇಧಿಸಿರುವುದರಿಂದ ಹಳೆ ಮುಂಬೈ- ಪುಣೆ ರಸ್ತೆ ಬಳಸುವಂತೆ ಪೊಲೀಸರು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com