26 /11 ದಾಳಿಗೆ ಹಣಕಾಸು ನೆರವು ನೀಡಿದವರೊಂದಿಗೆ ಹುರಿಯತ್ ಮುಖಂಡನ ಸಂಪರ್ಕ!

ಹುರಿಯತ್ ಕಾನ್ಫರೆನ್ಸ್ ನ ಸದಸ್ಯ ಅಹ್ಮದ್ ಷಾ ಹಾಗೂ 26 /11 ಮುಂಬೈ ದಾಳಿಗೆ ಹಣ ಸಹಾಯ ಮಾಡಿದ ವ್ಯಕ್ತಿಗಳಿಗೂ ನಿರಂತರ ಸಂಪರ್ಕ ಇರುವುದನ್ನು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿವೆ.
26 /11 ಮುಂಬೈ ದಾಳಿ(ಸಂಗ್ರಹ ಚಿತ್ರ)
26 /11 ಮುಂಬೈ ದಾಳಿ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಉಗ್ರರಿಗೆ ಹಣ ಸಹಾಯ ಮಾಡುತ್ತಿದ್ದ ಕಾಶ್ಮೀರ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ನ ಸದಸ್ಯ ಅಹ್ಮದ್ ಷಾ ಹಾಗೂ 26  /11 ಮುಂಬೈ ದಾಳಿಗೆ ಹಣ ಸಹಾಯ ಮಾಡಿದ ವ್ಯಕ್ತಿಗಳಿಗೂ ನಿರಂತರ ಸಂಪರ್ಕ ಇರುವುದನ್ನು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿವೆ.

ಕಾಶ್ಮೀರದ ಗಡಿ ಪ್ರದೇಶದಲ್ಲಿರುವ ಪಾಕಿಸ್ತಾನದ ಉಗ್ರರಿಗೆ ಹಣಕಾಸಿನ ನೆರವು ನೀಡುತ್ತಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಅಹ್ಮದ್ ಷಾ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿತ್ತು. ಅಹ್ಮದ್ ಷಾ, 2007 -2010 ನಡುವೆ ಇಟಲಿಯಿಂದ ಸುಮಾರು 3 ಕೋಟಿ ರೂಪಾಯಿ ಪಡೆದಿದ್ದಾನೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಇಟಲಿ ನಗರದಲ್ಲಿರುವ ಮದೀನಾ ಟ್ರೇಡಿಂಗ್ ನಿಂದ ಅಹ್ಮದ್ ಷಾ ಗೆ ಹಣ ವರ್ಗಾವಣೆಯಾಗಿದ್ದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ವಾಸಿಸುವ ಜಾವೇದ್ ಇಕ್ಬಾಲ್ ಹಣ ಕಳಿಸುತ್ತಿದ್ದ ಎಂದು ತಿಳಿದುಬಂದಿದೆ. ಇಟಾಲಿಯಲ್ಲಿ ಇಲ್ಲದಿದ್ದರೂ ಮದೀನಾ ಟ್ರೇಡಿಂಗ್ ಇಕ್ಬಾಲ್ ಹೆಸರಿನಲ್ಲಿ ಸುಮಾರು 300 ವಹಿವಾಟುಗಳನ್ನು ನಡೆಸಿದೆ. 2009 ರಲ್ಲಿ ಇಟಲಿ ಪೊಲೀಸರು ಬಂಧಿಸಿದ್ದ ಇಬ್ಬರು ಪಾಕಿಸ್ತಾನಿ ನಾಗರಿಕರು ಈ ವಿಷಯ ಬಹಿರಂಗಪಡಿಸಿದ್ದಾರೆ.

ಗುರುತಿನ ಚೀಟಿ ಹಾಗೂ ಪಾಸ್ಪೋರ್ಟ್ ಕಳ್ಳತನದಿಂದ ಈ ಹಣಕಾಸಿನ ವಹಿವಾಟು ನಡೆದಿದೆ ಎಂದು ಶಂಕಿಸಲಾಗಿದೆ. 26 /11 ರ ಮುಂಬೈ ದಾಳಿಯ ವೇಳೆ ಮದೀನಾ ಟ್ರೇಡಿಂಗ್ ಹೆಸರು ವ್ಯಾಪಕವಾಗಿ ಕೇಳಿಬಂದಿತ್ತು. ಉಗ್ರರ ದಾಳಿ ವೇಳೆ ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ ನ್ನು ಸಕ್ರಿಯಗೊಳಿಸಲು 229 ಯುಎಸ್ ಡಾಲರ್ ಮೊತ್ತವನ್ನು ವೆಸ್ಟರ್ನ್ ಯೂನಿಯನ್ ಮನಿ ಮೂಲಕ ವರ್ಗಾವಣೆ ಮಾಡಲಾಗಿತ್ತು. ಈ ವೇಳೆ ಮದೀನಾ ಟ್ರೇಡಿಂಗ್ ಹೆಸರು ಉಗ್ರರಿಗೆ ಹಣ ಸಹಾಯಮಾಡಿರುವ ವಿಷಯದೊಂದಿಗೆ ತಳಕು ಹಾಕಿಕೊಂಡಿತ್ತು. ಈ ಮೊತ್ತ ವರ್ಗಾವಣೆಯಾಗಿದ್ದದ್ದೂ ಜಾವೇದ್ ಇಕ್ಬಾಲ್ ಹೆಸರಿನಲ್ಲಿ. ಈಗಲೂ ಜಾವೇದ್ ಹೆಸರಿನಲ್ಲೇ ಉಗ್ರರಿಗೆ ಸಹಾಯ ಮಾಡಲು ಹುರಿಯತ್ ನಾಯಕನಿಗೆ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಣ್ಣ ಪ್ರಮಾಣದಲ್ಲಿ ಹುರಿಯತ್ ಕಾನ್ಫರೆನ್ಸ್ ನ ಅಹ್ಮದ್ ಷಾ ಹಾಗೂ ಮತ್ತೋರ್ವ ಹುರಿಯತ್ ಮುಖಂಡ ಯಾರ್ ಮೊಹಮ್ಮದ್ ಖಾನ್ ಗೆ ಹಣ ವರ್ಗಾವಣೆಯಾಗಿದೆ. ತನ್ನ ವಿರುದ್ಧ ಕೇಳಿಬಂದಿರುವ ಆರೋಪವನ್ನು ಷಾ ತಌಹಾಕಿದ್ದಾನೆ. ಆದರೆ ಪೊಲೀಸರು ಮಾತ್ರ ಹಣ ಸ್ವೀಕರಿಸಿರುವುದನ್ನು ಹುರಿಯತ್ ಮುಖಂಡ ಒಪ್ಪಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಜಮ್ಮು ಜಿಲ್ಲಾ ನ್ಯಾಯಾಲಯ ಇಬ್ಬರೂ ಆರೋಪಿಗಳನ್ನು ಬಂಧನದಿಂದ ತಾತ್ಕಾಲಿಕವಾಗಿ ಬಿಡುಗಡೆಗೊಳಿಸಿದೆ. ಆದರೆ ಅಹ್ಮದ್ ಬಳಿ ಇದ್ದ ಒಂದು ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿರುವುದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com