ಹೂಡಿಕೆಗೆ ಇರಾನ್ ಆಹ್ವಾನ

ಪರಮಾಣು ತಂತ್ರಜ್ಞಾನ ಅಬಿsವೃದಿಟಛಿಗೆ ಸಂಬಂಧಿಸಿದಂತೆ ಇರಾನ್ ಮೇಲೆ ಜಗತ್ತಿನ ಇತರ ಪ್ರಮುಖ ರಾಷ್ಟ್ರಗಳು ವಿಧಿಸಿದ್ದ ನಿರ್ಬಂಧಗಳನ್ನು ಹಿಂತೆಗೆಯುವ...
ಇರಾನ್ ಅಧ್ಯಕ್ಷ ಹಸ್ಸನ್ ರೌಹಾನಿ ಜತೆ ಪ್ರಧಾನಿ ನರೇಂದ್ರ ಮೋದಿ (ಕೃಪೆ: ಎಎಫ್ ಪಿ)
ಇರಾನ್ ಅಧ್ಯಕ್ಷ ಹಸ್ಸನ್ ರೌಹಾನಿ ಜತೆ ಪ್ರಧಾನಿ ನರೇಂದ್ರ ಮೋದಿ (ಕೃಪೆ: ಎಎಫ್ ಪಿ)
Updated on

ನವದೆಹಲಿ: ಪರಮಾಣು ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಇರಾನ್ ಮೇಲೆ ಜಗತ್ತಿನ ಇತರ ಪ್ರಮುಖ ರಾಷ್ಟ್ರಗಳು ವಿಧಿಸಿದ್ದ ನಿರ್ಬಂಧಗಳನ್ನು ಹಿಂತೆಗೆಯುವ ಮೊದಲೇ ಇರಾನ್ ಭಾರತಕ್ಕೆ ಭಾರಿ ಆಫರ್‍ಗಳನ್ನು ಮುಂದಿಟ್ಟಿದೆ. ಇರಾನ್‍ನ ಪ್ರಮುಖ ಬಂದರನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಮೂಲಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ 800 ಕೋಟಿ ಡಾಲರ್ (ಸುಮಾರು ರು.50 ಸಾವಿರ ಕೋಟಿ) ಬಂಡವಾಳ ತೊಡಗಿಸುವಂತೆ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಭಾರತವನ್ನು ಆಹ್ವಾನಿಸಿದ್ದಾರೆ. ಇರಾನ್‍ನ ಚಾಬಹಾರ್ ಬಂದರು ಪಾಕಿಸ್ತಾನವನ್ನು ಬದಿಗೊತ್ತಿ ವ್ಯವಹಾರ ನಡೆಸಲು ಪ್ರಮುಖ ಆಯಕಟ್ಟಿನ ಸ್ಥಳವಾಗಿದ್ದು ಅದನ್ನು ಅಭಿವೃದ್ದಿ ಪಡಿಸುವಂತೆಯೂ ಮನವಿ ಮಾಡಿದ್ದಾರೆ ಎಂದು ಭಾರತದಲ್ಲಿನ ಇರಾನ್ ರಾಯಭಾರಿ ತಿಳಿಸಿದ್ದಾರೆ. ಭಾರತ ಮತ್ತು ಇರಾನ್ ನಡುವೆ ಸುಸ್ಥಿರ ಸಂಬಂಧಗಳಿವೆ. ಆದರೆ ನಿರ್ಬಂಧಗಳು ಮತ್ತು ಅಮೆರಿಕದ ಒತ್ತಡ ಎರಡೂ ದೇಶಗಳ ನಡುವೆ ಗೋಡೆಯಾಗಿತ್ತು ಎಂದು ರಾಯಭಾರಿ ಘೋಲಾಮ್ರೆಜ ಅನ್ಸಾರಿ ಹೇಳಿದ್ದಾರೆ. ನಿರ್ಬಂಧಗಳು ಶೀಘ್ರ ತೆರವಾಗಲಿದೆ. ಇದರ ಜೊತೆಗೆ ಎರಡೂ ದೇಶಗಳು ನಿಕಟ ವಾಣಿಜ್ಯ ಸಂಬಂಧಗಳನ್ನು ಹೊಂದಿರುವುದರಿಂದ ಹೂಡಿಕೆ ಅವಕಾಶಗಳನ್ನು ಪಡೆಯಲು ಸುವರ್ಣ ಸಂದರ್ಭವಾಗಿದೆ ಎಂದಿದ್ದಾರೆ. ಸಂಪರ್ಕ ಸಾಧಿಸುವುದು ಪ್ರಧಾನಿ ಮೋದಿಯವರ ಮುಖ್ಯ ಗುರಿಯಾಗಿದ್ದು ಇರಾನ್ ಸರ್ಕಾರದ ನೀತಿಗಳೊಂದಿಗೆ ಸರಿಹೊಂದಲಿದೆ. ಎರಡೂ ದೇಶಗಳ ನಡುವೆ ಸಂಪರ್ಕ ಸಾಧಿಸಲು ಮನವಿ ಮಾಡಿರುವುದಾಗಿ ಅನ್ಸಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com