ರಕ್ಷಣಾ ತಂತ್ರಜ್ಞಾನ ಖಾಸಗಿಗೆ ವರ್ಗ; ಸಚಿವಾಲಯ ಅಸ್ತು

ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿ ರಕ್ಷಣಾ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ.
ಲಕ್ಷ್ಯ
ಲಕ್ಷ್ಯ

ನವದೆಹಲಿ: ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿ ರಕ್ಷಣಾ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ.

ಪೈಲಟ್‍ ರಹಿತ ವಿಮಾನ(ಪಿಟಿಎ) 'ಲಕ್ಷ್ಯ'ದ ವಾಣಿಜ್ಯ ಉತ್ಪಾದನೆಯ ಹೊಣೆಯನ್ನು ಖಾಸಗಿ ಸಂಸ್ಥೆ ಎಲ್ ಆ್ಯಂಡ್ ಟಿ(ಲಾರ್ಸನ್ ಆ್ಯಂಡ್ ಟಬ್ರೋ)ಗೆ ವಹಿಸುವಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಮಾಡಿದ ಪ್ರಸ್ತಾಪಕ್ಕೆ ಸಚಿವಾಲಯ ಒಪ್ಪಿಗೆ ನೀಡಿದೆ. ಅದರಂತೆ ವಿಮಾನ ಉತ್ಪಾದನೆಗೆ ಬೇಕಾದ ತಂತ್ರಜ್ಞಾನವು ಎಲ್ ಆ್ಯಂಡ್ ಟಿಗೆ ವರ್ಗಾವಣೆಯಾಗಲಿದೆ.

ಡಿಆರ್‍ಡಿಒಗೆ ಗೌರವ ಧನ: ಉತ್ಪಾದನೆಯಾಗುವ ಮತ್ತು ಮಾರಾಟವಾಗುವ ಪ್ರತಿ ಲಕ್ಷ್ಯ ಪಿಟಿಎ ಪರವಾಗಿ ಕಂಪನಿಯು ಡಿಆರ್ ಡಿಒಗೆ ರಾಯಧನ ನೀಡಲಿದೆ. ರಾಯಧನದ ಆಧಾರದಲ್ಲಿ ಕ್ಲಿಷ್ಟ ರಕ್ಷಣಾ ತಂತ್ರಜ್ಞಾನವನ್ನು ಖಾಸಗಿಯವರಿಗೆ ಒಪ್ಪಿಸುತ್ತಿರುವುದು ಇದೇ ಮೊದಲು.

ಸಿಂಗಾಪುರ, ಮಲೇಷ್ಯಾ, ಇಸ್ರೇಲ್ ಸೇರಿದಂತೆ ಹಲವು ದೇಶಗಳ ಸೇನೆಗಳಿಂದ ಲಕ್ಷ್ಯ ವಿಮಾನಕ್ಕೆ ಬೇಡಿಕೆಯಿದೆ. ಆದರೆ, ವಿಮಾನವನ್ನು ವಿದೇಶಗಳಿಗೆ ಮಾರಾಟ ಮಾಡುವ ಮೊದಲು ಖಾಸಗಿ ಕಂಪನಿಯು ರಕ್ಷಣಾ ಸಚಿವಾಲಯದ ಅನುಮತಿ ಪಡೆಯಬೇಕಿದೆ. ಲಕ್ಷ್ಯ ಪಿಟಿಎ ಎನ್ನುವುದು ಮರುಬಳಕೆಯಾಗಬಲ್ಲ ಸಬ್ ಸಾನಿಕ್ ಏರಿಯಲ್ ಟಾರ್ಗೆಟ್ ವ್ಯವಸ್ಥೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com