ಅಮೆರಿಕ ಲಂಚ ಪ್ರಕರಣ ನಡೆದಿದ್ದು ಕಾಂಗ್ರೆಸ್ ಇದ್ದಾಗ: ಪರ್ರಿಕರ್

ಅಮೆರಿಕದ ಕಂಪನಿಯಿಂದ ಗೋವಾ ಸಚಿವರಿಗೆ ಲಂಚ ಆರೋಪ ಕೇಳಿ ಬಂದ ಬೆನ್ನಲ್ಲೇ, ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರು...
ಮನೋಹರ್ ಪರ್ರಿಕರ್
ಮನೋಹರ್ ಪರ್ರಿಕರ್

ಪಣಜಿ: ಅಮೆರಿಕದ ಕಂಪನಿಯಿಂದ ಗೋವಾ ಸಚಿವರಿಗೆ ಲಂಚ ಆರೋಪ ಕೇಳಿ ಬಂದ ಬೆನ್ನಲ್ಲೇ, ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರು ಕಾಂಗ್ರೆಸ್‍ನತ್ತ ಬೆರಳು ತೋರಿಸಿದ್ದಾರೆ. ಗೋವಾದಲ್ಲಿ ದಿಗಂಬರ ಕಾಮತ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಸಚಿವರಾಗಿದ್ದವರೇ ಲಂಚ ಪಡೆದವರು ಎಂದು ಅವರು ಆರೋಪಿಸಿದ್ದಾರೆ.
ಆದರೆ, ಆ ಇಬ್ಬರು ಸಚಿವರ ಹೆಸರನ್ನು ಮಾತ್ರ ಅವರು ಬಹಿರಂಗ ಪಡಿಸಿಲ್ಲ. ಗೋವಾ ಮತ್ತು ಗುವಾಹಟಿಯಲ್ಲಿ ಜಲ ಸಂಬಂಧ ಯೋಜನೆಗಳ ಗುತ್ತಿಗೆ ಪಡೆಯುವ ಸಲುವಾಗಿ ನ್ಯೂಜೆರ್ಸಿ ಮೂಲದ ಲೂಯಿಸ್ ಬರ್ಗರ್ ಕಂಪನಿ ಗೋವಾದ ಇಬ್ಬರು ಸಚಿವರಿಗೆ ಕೋಟ್ಯಂತರ ರುಪಾಯಿ ಲಂಚ ನೀಡಿತ್ತು ಎಂಬ ವಿಚಾರ ಶನಿವಾರ ವಷ್ಟೇ ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪರ್ರಿಕರ್ ಮತ್ತು ಗೋವಾ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com