

ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಂಥ ಸಂಸ್ಥೆಗಳನ್ನು ಹಿಂದೂ ವಿರೋಧ ಚಟುವಟಿಕೆಗಳಿಗಾಗಿ ಉಪಯೋಗಿಸಲಾಗುತ್ತದೆ. ಹೀಗೆಂದು ಆರ್‍ಎಸ್‍ಎನ ಮುಖವಾಣಿ ವಾರಪತ್ರಿಕೆಯಲ್ಲಿ ಆರೋಪಿಸಲಾಗಿದೆ.
ಈ ಸಂಸ್ಥೆಗಳಲ್ಲಿ ಭಾರತ ಮತ್ತು ಹಿಂದೂ ವಿರೋಧ ಚಟುವಟಿಕೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಅದು ದೂರಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಈಗಲೂ ಐಐಎಂನಂಥ ಪ್ರಮುಖ ಇನ್‍ಸ್ಟಿಟ್ಯೂಟ್‍ಗಳನ್ನು ನಿಯಂತ್ರಿಸುತ್ತಿವೆ ಎಂದು ದೂರಿರುವ ಈ ವಾರಪತ್ರಿಕೆ, ಅಲ್ಲಿನ ವಿಜ್ಞಾನಿಗಳು, ನಿರ್ದೇಶಕರು, ಅಧಿಕಾರಿಗಳೂ ಅದಕ್ಕೆ ಸಹಕರಿಸುತ್ತಿದ್ದಾರೆಂದು ಆಪಾದಿಸಿದೆ.
ಹಿಂದುತ್ವವನ್ನು ಬಿಂಬಿಸುವ, ಉಳಿಸುವ ಬದಲಾವಣೆಗಳು ಸಂಸ್ಥೆಯಲ್ಲಿ ಆಗಬೇಕು ಎಂದು ಪತ್ರಿಕೆ ಬರೆದಿದೆ. ರೂರ್ಕೆಲಾ ಐಐಟಿನಲ್ಲಿ ವಿದ್ಯಾರ್ಥಿಗಳಿಗೆ ಮಾಂಸಾಹಾರ ಪೂರೈಕೆ, ಹಾಲ್ ನಲ್ಲಿ ಪೂಜೆಯನ್ನು ನಿಷೇಧಿಸುವ ನಿರ್ಧಾರವನ್ನು ಯುಪಿಎ ಅವಧಿಯಲ್ಲಿ ಕೈಗೊಳ್ಳಲಾಗಿತ್ತು ಎಂದೂ ಆರೋಪಿಸಲಾಗಿದೆ.