ನಗರವಾಸಿಗಳಿಗಿಂತ ಹಳ್ಳಿಗರೇ ಆರೋಗ್ಯವಂತರು: ಸಮೀಕ್ಷೆ

ನಗರದಲ್ಲಿ ವಾಸಿಸುವ ಜನರಿಗಿಂತ ಹಳ್ಳಿಯಲ್ಲಿ ವಾಸಿಸುವ ಜನರೇ ಹೆಚ್ಚು ಆರೋಗ್ಯವಂತರಾಗಿರುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನಗರದಲ್ಲಿ ವಾಸಿಸುವ ಜನರಿಗಿಂತ ಹಳ್ಳಿಯಲ್ಲಿ ವಾಸಿಸುವ ಜನರೇ ಹೆಚ್ಚು ಆರೋಗ್ಯವಂತರಾಗಿರುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ನಗರವಾಸಿಗಳಲ್ಲಿ ಶೇ. 12 ಜನರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಹಳ್ಳಿಯ ಜನರಲ್ಲಿ ಕೇವಲ ಶೇ.9 ಜನರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆಯಂತೆ.

ಅದೇ ವೇಳೆ ಹಳ್ಳಿಯಲ್ಲಿ ವಾಸಿಸುವ ಜನರಿಗೆ ಆರೋಗ್ಯ ಸಮಸ್ಯೆಗಳು ಬಂದರೆ ಆಸ್ಪತ್ರೆಯಲ್ಲಿ ದಾಖಲಾಗದೆ ಅವರು ಸರಾಸರಿ ರು. 509 ಖರ್ಚು ಮಾಡುತ್ತಾರೆ. ಅದೇ ವೇಳೆ ನಗರವಾಸಿಗಳು ಸರಾಸರಿ ರು. 639 ಖರ್ಚು ಮಾಡುತ್ತಾರೆ.

ಹಳ್ಳಿಗಳಲ್ಲಿ  ಶೇ. 58 ರಷ್ಟು ಆರೋಗ್ಯ ಕೇಂದ್ರಗಳಿದ್ದರೆ ನಗರಗಳಲ್ಲಿ ಶೇ. 68 ಆರೋಗ್ಯ ಕೇಂದ್ರಗಳಿವೆ.

ಅಂಕಿಅಂಶಗಳ ಸಚಿವಾಲಯ ನಡೆಸಿದ ಆರೋಗ್ಯ ಸಮೀಕ್ಷೆಯ ಪ್ರಕಾರ ಹಳ್ಳಿಯವರು ಮತ್ತು ನಗರವಾಸಿಗಳು ಚಿಕಿತ್ಸೆ ಬಯಸಿ ಮೊದಲು ಖಾಸಗಿ ವೈದ್ಯರನ್ನೇ ಸಂಪರ್ಕಿಸುತ್ತಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com