
ಶ್ರೀನಗರ: ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಫಾರೂಕ್ ಅಬ್ದುಲ್ಲಾ ಉಚ್ಚಾಟನೆಗೆ ಜಮ್ಮು-ಕಾಶ್ಮೀರ ಹೈಕೋರ್ಟ್ ತಡೆ ನೀಡಿದೆ.
ಹೈಕೋರ್ಟ್ ತಡೆ ನೀಡಿರುವುದರಿಂದ ಫಾರೂಕ್ ಅಬ್ದುಲ್ಲಾ ಜೆಕೆಸಿಎಯ ಅಧ್ಯಕ್ಷ ಸ್ಥಾನದಲೇ ಮುಂದುವರೆಯಲಿದ್ದಾರೆ. ಇಂದು ನಡೆದ ಆಂತರಿಕ ಚುನಾವಣೆಯಲ್ಲಿ ಅಬ್ದುಲ್ಲಾ ಅವರನ್ನು ಅಧ್ಯಕ್ಷ ಸ್ಥನಾದಿಂದ ಉಚ್ಚಾಟಿಸಿ ಜಮ್ಮು-ಕಾಶ್ಮೀರದ ಕ್ರೀಡಾ ಸಚಿವ ಇಮ್ರಾನ್ ರಾಜಾ ಅನ್ಸಾರಿ ಅವರನ್ನು ಅವಿರೋಧವಾಗಿ ನೇಮಕ ಮಾಡಲಾಗಿತ್ತು.
ತಮ್ಮ ಅವಧಿ ಇನ್ನೂ 3 ವರ್ಷ ಬಾಕಿ ಇದೆ. ಆದ್ದರಿಂದ ಈಗ ತಮ್ಮನ್ನು ಉಚ್ಚಾಟನೆ ಮಾಡಿರುವುದು ಅಕ್ರಮ ಎಂದು ಆರೋಪಿಸಿದ್ದ ಫಾರುಕ್ ಅಬ್ದುಲ್ಲಾ ತಡೆ ನೀದಬೇಕೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಫಾರೂಕ್ ಅಬ್ದುಲಾ ಉಚ್ಚಾಟನೆಗೆ ತಡೆ ನೀಡಲಾಗಿದೆ. 64 ಅಂಗಸಂಸ್ಥೆಗಳ ಪೈಕಿ ಚುನಾವಣೆಯಲ್ಲಿ ಭಾಗವಹಿಸಿದ್ದ 42 ಅಂಗಸಂಸ್ಥೆಗಳು ಫಾರೂಕ್ ಅಬ್ದುಲಾ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.
Advertisement