ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ಫಾರೂಕ್ ಅಬ್ದುಲ್ ಉಚ್ಚಾಟನೆ

ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಉಚ್ಚಾಟಿಸಲಾಗಿದೆ.
ಫಾರೂಕ್ ಅಬ್ದುಲ್ಲಾ(ಸಂಗ್ರಹ ಚಿತ್ರ)
ಫಾರೂಕ್ ಅಬ್ದುಲ್ಲಾ(ಸಂಗ್ರಹ ಚಿತ್ರ)

ಶ್ರೀನಗರ: ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಉಚ್ಚಾಟಿಸಲಾಗಿದೆ.

ಫಾರೂಕ್ ಅಬ್ದುಲ್ಲಾ ಉಚ್ಚಾಟನೆಯನ್ನು ಕಾಶ್ಮೀರ ಜಿಮ್ಖಾನಾ ಕ್ರಿಕೆಟ್ ಕ್ಲಬ್ ನ ಸದಸ್ಯ ಮಂಜೂರ್ ವಾಜೀರ್ ಸ್ಪಷ್ಟಪಡಿಸಿದ್ದು, ಜು.20 ರಂದು ನಡೆದ ಆಂತರಿಕ ಚುನಾವಣೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯ 64 ಅಂಗಸಂಸ್ಥೆಗಲ ಪೈಕಿ 42 ಅಂಗಸಂಸ್ಥೆಗಳು ಚುನಾವಣೆಯಲ್ಲಿ ಭಾಗವಹಿಸಿದ್ದವು.

ಅಬ್ದುಲ್ಲಾ ಉಚ್ಚಾಟನೆಯಿಂದ ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನಕ್ಕೆ ಜಮ್ಮು-ಕಾಶ್ಮೀರದ ಕ್ರೀಡಾ ಸಚಿವ ಇಮ್ರಾನ್ ರಾಜಾ ಅನ್ಸಾರಿ ಅವರನ್ನು ನೇಮಕ ಮಾಡಲಾಗಿದೆ ಎಂದು ವಾಜೀರ್ ತಿಳಿಸಿದ್ದಾರೆ. ಮೆಹಬೂಬ್ ಇಕ್ಬಾಲ್ ಸಂಸ್ಥೆಯ ನೂತನ ಅಧ್ಯಕ್ಷ, ಮೊಹಮದ್ ಇಕ್ಬಾಲ್ ಪ್ರಧಾನ ಕಾರ್ಯದರ್ಶಿ, ಹಾಗೂ ಅಬ್ದುಲ್ ರೌಫ್ ನೂತನ ಖಜಾಂಚಿಯಾಗಿ ಆಯ್ಕೆಗೊಂಡಿದ್ದಾರೆ.
ಕ್ರಿಕೆಟ್ ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿ 1980 ರಲ್ಲಿ ಆಯ್ಕೆಗೊಂಡ ನಂತರ ಮೊದಲ ಬಾರಿಗೆ ಫಾರೂಕ್ ಅಬ್ದುಲ್ಲಾ ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಮೇಲಿನ ಅಧಿಕಾರ ಕಳೆದುಕೊಂಡಿದ್ದಾರೆ. ಹಣಕಾಸಿನ ವ್ಯವಹಾರಗಳನ್ನು ಸರಿಯಾಗಿ ನಿಭಾಯಿಸಿಲ್ಲ ಎಂಬ ಆರೋಪವೂ ಫಾರೂಕ್ ಅಬ್ದುಲ್ಲಾ ವಿರುದ್ಧ ಕೇಳಿಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com