ಭಾರತದಲ್ಲಿ ನಗರಕ್ಕಿಂತ ಗ್ರಾಮೀಣ ವಾಸಿಗಳೇ ಆರೋಗ್ಯವಂತರು: ಸಮೀಕ್ಷೆ

ನಗರ ಪ್ರದೇಶದಲ್ಲಿ ವಾಸಿಸುವ ಜನರಿಗಿಂತ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರೇ ಹೆಚ್ಚು ಆರೋಗ್ಯವಂತರು ಎಂದು ಇತ್ತೀಚಿನ ಆರೋಗ್ಯ ಸಮೀಕ್ಷೆ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನಗರ ಪ್ರದೇಶದಲ್ಲಿ ವಾಸಿಸುವ ಜನರಿಗಿಂತ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರೇ ಹೆಚ್ಚು ಆರೋಗ್ಯವಂತರು ಎಂದು ಇತ್ತೀಚಿನ ಆರೋಗ್ಯ ಸಮೀಕ್ಷೆ ಹೇಳಿದೆ.

15 ದಿನಗಳ ಕಾಲ ನಡೆದ ಈ ಸಮೀಕ್ಷೆಯಲ್ಲಿ, ನಗರ ಪ್ರದೇಶದಿಂದ ಶೇ. 12ರಷ್ಟು ಕಾಯಿಲೆಗಳು ವರದಿಯಾಗಿವೆ. 2004ಕ್ಕೆ ಹೋಲಿಕೆ ಮಾಡಿದರೆ ಶೇ.2ರಷ್ಟು ಹೆಚ್ಚಾಗಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಶೇ.9ರಷ್ಟು ಕಾಯಿಲೆಗಳು ವರದಿಯಾಗಿವೆ.

ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ, ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ವೆಚ್ಚವೂ ಕಡಿಮೆಯಾಗಿದ್ದು, ನಗರ ಪ್ರದೇಶದಲ್ಲಿ ಹೊರ ರೋಗಿಯ ಚಿಕಿತ್ಸೆಗೆ ಸರಾಸರಿ 639 ರುಪಾಯಿ ವೆಚ್ಚವಾದರೆ, ಗ್ರಾಮೀಣ ಪ್ರದೇಶದಲ್ಲಿ 509 ರುಪಾಯಿ ವೆಚ್ಚವಾಗುತ್ತದೆ.

ಅಂಕಿಅಂಶಗಳ ಸಚಿವಾಲಯ ನಡೆಸಿದ ಈ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶದಲ್ಲಿ ಅಲೋಪತಿ ಚಿಕಿತ್ಸೆ ಹೆಚ್ಚು ಪ್ರಚಲಿತವಾಗಿದೆ. ದೇಶಾದ್ಯಂತ ಖಾಸಗಿ ವೈದ್ಯರೇ ಚಿಕಿತ್ಸೆಗೆ ಪ್ರಮುಖ ಮೂಲವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com