ಅಕ್ಟೋಬರ್ ನಲ್ಲಿ ಯಹೂದಿ ದೇಶಕ್ಕೆ ರಾಷ್ಟ್ರಪತಿ ಪ್ರವಾಸ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಂಬರುವ ಅಕ್ಟೋಬರ್ ನಲ್ಲಿ ಇಸ್ರೇಲ್, ಪ್ಯಾಲೆಸ್ತೀನ್ ದೇಶಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ..
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
Updated on: 

ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಂಬರುವ ಅಕ್ಟೋಬರ್ ನಲ್ಲಿ ಇಸ್ರೇಲ್, ಪ್ಯಾಲೆಸ್ತೀನ್  ದೇಶಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಜೊತೆಗೆ ಜೋರ್ಡಾನ್ ಗೂ ಭೇಟಿ ನೀಡೋ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೊದಿ ಈ ವರ್ಷದ ಜೂನ್ ನಲ್ಲಿ  ಇಸ್ರೇಲ್ , ಪ್ಯಾಲೇಸ್ತೆನ್ ಹಾಗೂ ಮತ್ತು ಜೊರ್ಡಾನ್ ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದರು. ಆದರೆ ಆರ್ ಎಸ್ ಎಸ್ ವಿರೋಧದಿಂದಾಗಿ ಮೋದಿ ಪ್ರವಾಸ ರದ್ದುಗೊಳಿಸಲಾಯ್ತು.

ಹೀಗಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಂದಿನ ಅಕ್ಟೋಬರ್ ನಲ್ಲಿ ಯೆಹೂದಿ ರಾಷ್ಟ್ರದಲ್ಲೂ ಪ್ರವಾಸ ಕೈಗೊಳ್ಳಲಿದ್ದಾರೆ. ಇಸ್ರೇಲ್ ಸ್ವತಂತ್ರ್ಯ ರಾಷ್ಟ್ರವಾದ ನಂತರ  1992 ರಲ್ಲಿ ಭಾರತ ಇಸ್ರೇಲ್ ಜೊತೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧ ಹೊಂದಿತ್ತು.

ಭಾರತ ರತ್ನ ಮಾಜಿ ಪ್ರಧಾನಿ ವಾಜಪೇಯಿ ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಎಲ್.ಕೆ ಅಡ್ವಾಣಿ ಕೂಡ ಇಸ್ರೇಲ್ ಗೆ ಭೇಟಿ ನೀಡಿದ್ದರು. ಹಾಗೆಯೇ ಜಸ್ವಂತ್ ಸಿಂಗ್ ಮತ್ತು ಎಸ್.ಎಂ ಕೃಷ್ಣ ಕೂಡ ಇಸ್ರೇಲ್ ಯಹೂದಿ ರಾಷ್ಟ್ರದ ಪ್ರವಾಸ ಕೈಗೊಂಡಿದ್ದರು. ಇತ್ತೀಚೆಗೆ ಗೃಹಸಚಿವ ರಾಜನಾಥ್ ಸಿಂಗ್ ಕೂಡ ಇಸ್ರೇಲ್ ಪ್ರವಾಸ ಕೈಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com