ಸರ್ಕಾರಿ ಮನೆಗಳಿಗೆ ಹೋಗದ 47 ಸಂಸದರು

ಲೋಕಸಭಾ ಚುನಾವಣೆ ಮುಗಿದು ಒಂದು ವರ್ಷ ಕಳೆದ ನಂತರವೂ ಸಂಸದರಿಗೆ...
ಭಾರತ ಸಂಸತ್ತು(ಸಂಗ್ರಹ ಚಿತ್ರ)
ಭಾರತ ಸಂಸತ್ತು(ಸಂಗ್ರಹ ಚಿತ್ರ)
Updated on

ನವದೆಹಲಿ: ಲೋಕಸಭಾ ಚುನಾವಣೆ ಮುಗಿದು ಒಂದು ವರ್ಷ ಕಳೆದ ನಂತರವೂ ಸಂಸದರಿಗೆ ವಾಸಯೋಗ್ಯವಾದ ಅಧಿಕೃತ ನಿವಾಸಗಳನ್ನು ಮಂಜೂರು ಮಾಡಿದ್ದರೂ ಸಹ 47 ಸಂಸದರು ವಿವಿಧ ರಾಜ್ಯ ಸರ್ಕಾರಗಳು ನಡೆಸಿಕೊಂಡು ಹೋಗುವ ದುಬಾರಿ ಅತಿಥಿಗೃಹಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ.

ಲೋಕಸಭಾ ಕಾರ್ಯಾಲಯ ನೀಡಿರುವ ಉತ್ತರದಲ್ಲಿ ಒಟ್ಟು 47 ಮಂದಿ ಸಂಸದರಲ್ಲಿ, 13 ಮಂದಿ ಸಂಸದರು ತಮಿಳುನಾಡು ರಾಜ್ಯದವರಾಗಿದ್ದಾರೆ. ಉಳಿದಂತೆ ಆಂಧ್ರಪ್ರದೇಶ, ಪಂಜಾಬ್, ಛತ್ತೀಸ್ ಗಢ್, ರಾಜಸ್ತಾನ, ಗುಜರಾತ್, ಪಂಜಾಬ್, ಹರ್ಯಾಣ, ಬಿಹಾರ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯಗಳ ಸಂಸದರಾಗಿದ್ದಾರೆ.

ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ಕಾರ್ಯಕರ್ತ ಎಸ್.ಸಿ.ಅಗರ್ವಾಲ, ಸರ್ಕಾರಿ ವಸತಿಗೃಹಗಳಲ್ಲಿ ಬರುವ ವೆಚ್ಚವನ್ನು ಸಂಸದರಿಂದಲೇ ಭರಿಸಬೇಕು. ಅವರಿಗೆ ಅಧಿಕೃತ ನಿವಾಸ ನೀಡಿದ್ದರು ಸಹ ದುಬಾರಿ ವೆಚ್ಚದ ಅತಿಥಿಗೃಹಗಳಲ್ಲಿ ವಾಸಿಸಿ ಸರ್ಕಾರದ ಬೊಕ್ಕಸಕ್ಕೆ ಹೊರೆಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಇವರು ಆರ್ ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಸಿಕ್ಕ ಉತ್ತರದಂತೆ, ಅಧಿಕಾರಿಗಳು ಮಾಜಿ ಸಂಸದರಿಂದ ನಿಗದಿತ 30 ದಿನಗಳ ಒಳಗೆ ಸಂಸದರ ಸರ್ಕಾರಿ ವಸತಿಗೃಹವನ್ನು ಪಡೆದು ಹೊಸ ಸಂಸದರಿಗೆ ನೀಡದ್ದರಿಂದಾಗಿ ಮೇ 2014ರಿಂದ ಮೇ 2015ರವರೆಗೆ ಒಂದು ವರ್ಷ ಅವಧಿಯಲ್ಲಿ 24 ಕೋಟಿ ರೂಪಾಯಿ ಬಿಲ್ ಪಾವತಿ ಮಾಡಬೇಕಾಗಿ ಬಂದಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com