
ನವದೆಹಲಿ: 2014ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಪಟ್ಟಿಯನ್ನು ಪ್ರಕಟಿಸಲಾಗಿದ್ದು, ದೆಹಲಿ ಮೂಲದ ಭಾರತೀಯ ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇರಾ ಸಿಂಗಲ್ ಶೇ. 53 ಅಂಕ ಗಳಿಸುವ ಮೂಲಕ ಮೊದಲ ಸ್ಥಾನ ಗಳಿಸಿದ್ದಾರೆ.
ವೆಬ್ ಸೈಟ್ ನಲ್ಲಿ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮತ್ತು ತೇರ್ಗಡೆ ಹೊಂದದಿರುವ ಅಭ್ಯರ್ಥಿಗಳ ಹೆಸರುಗಳನ್ನು, ಅವರು ಗಳಿಸಿದ ಅಂಕಗಳನ್ನು ಪ್ರಕಟಿಸಲಾಗಿದೆ.
ಐಎಎಸ್, ಐಎಫ್ ಎಸ್ ಮತ್ತು ಐಪಿಎಸ್ ಹುದ್ದೆಗಳಿಗೆ ಕೇಂದ್ರ ಸರ್ಕಾರ ಪ್ರತಿವರ್ಷ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸುತ್ತದೆ.
ಅಂಗವೈಕಲ್ಯ ಹೊಂದಿರುವ ಇರಾ ಸಿಂಗಲ್ ಒಟ್ಟು 2 ಸಾವಿರದ 25ರಲ್ಲಿ 1750 ಅಂಕ ಪರೀಕ್ಷೆಯಲ್ಲಿ ಹಾಗೂ 275 ಅಂಕ ಸಂದರ್ಶನದಲ್ಲಿ ಹೀಗೆ ಒಟ್ಟು ಸಾವಿರದ 82 ಅಂಕ ಗಳಿಸಿದ್ದಾರೆ. ದ್ವಿತೀಯ ಸ್ಥಾನ ಕೇರಳದ ವೈದ್ಯ ರೇಣು ರಾಜ್ ಶೇ.52.14 ಮತ್ತು ಮೂರನೇ ರ್ಯಾಂಕ್ ನಿಧಿ ಗುಪ್ತಾ, ಶೇ.50.61 ಗಳಿಸಿದ್ದಾರೆ. ಇವರು ಗಳಿಸಿದ ಅಂಕಗಳನ್ನು ಗಮನಿಸಿದರೆ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷಾ ವಿಧಾನ ಎಷ್ಟು ಕಠಿಣವಾಗಿರುತ್ತದೆ ಎಂಬುದನ್ನು ಅರಿಯಬಹುದು ಎನ್ನುತ್ತಾರೆ ಯುಪಿಎಸ್ ಸಿಯ ಅಧಿಕಾರಿಯೊಬ್ಬರು.
ಪರೀಕ್ಷೆ ಫಲಿತಾಂಶ ಜುಲೈ 4ರಂದು ಪ್ರಕಟಗೊಂಡಿತ್ತು. ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಆಯೋಗದ ವೆಬ್ ಸೈಟ್ www.upsc.gov.in ನಲ್ಲಿ ವೀಕ್ಷಿಸಬಹುದು.
Advertisement