ಸಂಸತ್ತಿನ 2ನೇ ದಿನದ ಕಲಾಪವನ್ನು ಬಲಿ ಪಡೆದ ಲಲಿತ್ ಪ್ರಕರಣ

ವಿರೋಧ ಪಕ್ಷದ ಸದಸ್ಯರು ಯಾವುದೇ ವಿಷಯದ ಬಗ್ಗೆ ಸಮರ್ಥವಾಗಿ ವಾದ ಮಾಡಲು ಬಲಹೀನರಾಗಿದ್ದಾರೆ. ಆದರೆ ಅನಗತ್ಯ ಗದ್ದಲ ಸೃಷ್ಟಿಸಿ...
ಅರುಣ್ ಜೈಟ್ಲಿ
ಅರುಣ್ ಜೈಟ್ಲಿ

ನವದೆಹಲಿ: ವಿರೋಧ ಪಕ್ಷದ ಸದಸ್ಯರು ಯಾವುದೇ ವಿಷಯದ ಬಗ್ಗೆ ಸಮರ್ಥವಾಗಿ ವಾದ ಮಾಡಲು ಬಲಹೀನರಾಗಿದ್ದಾರೆ. ಆದರೆ ಅನಗತ್ಯ ಗದ್ದಲ ಸೃಷ್ಟಿಸಿ, ಅಡಚಣೆ ಮಾಡುವಲ್ಲಿ ಸ್ಟ್ರಾಂಗ್ ಆಗಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಆರೋಪಿಸಿದ್ದಾರೆ.

2ನೇ ದಿನದ ಸಂಸತ್ತಿನ ಕಲಾಪ ನಾಳೆಗೆ ಮುಂದೂಡಿದ ಹಿನ್ನೆಲೆಯಲ್ಲಿ ಬೇಸರ ವ್ಯಕ್ತ ಪಡಿಸಿದ ಅರುಣ್ ಜೈಟ್ಲಿ, ಸಚಿವೆ ಸುಷ್ಮಾ ಸ್ವರಾಜ್ ಏನು ಹೇಳುತ್ತಾರೆ ಎಂಬದನ್ನು ದೇಶದ ಜನತೆ ಕೇಳಬೇಕಿತ್ತು. ಆದರೆ ವಿರೋಧ ಪಕ್ಷದವರು ಸದನವನ್ನು ಸರಾಗವಾಗಿ ನಡೆಯಲು ಬಿಡುತ್ತಿಲ್ಲ ಎಂದು ದೂರಿದರು.

ಬಿಜೆಪಿ ಸಚಿವರು ಕಾನೂನು ಉಲ್ಲಂಘಿಸಲು ಅಕಾಶವಿಲ್ಲ ಎಂದು ಹೇಳಿದ ಜೈಟ್ಲಿ, ಪ್ರಕರಣ ಸಂಬಂಧ ಸದನದಲ್ಲಿ ಚರ್ಚಿಸಲು ಪ್ರತಿಪಕ್ಷಗಳು ಅವಕಾಶವನ್ನೇ ನೀಡುತ್ತಿಲ್ಲ. ಚರ್ಚೆಗೆ ನಿಂತರೆ ಸಾಕು, ಬಿಜೆಪಿ ಸಚಿವರು ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗಿ ಗದ್ದಲ ಆರಂಭಿಸುತ್ತಾರೆ ಹೀಗಾಗಿ ಸದನವನ್ನು ನಾಳೆಗೆ ಮುಂದೂಡಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಲಂಡನ್ ನಲ್ಲಿ ನೆಲೆಗೊಳ್ಳಲು ಅವಕಾಶ ಕಲ್ಪಿಸಿದ ಆರೋಪದಲ್ಲಿ ಸಿಲುಕಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೇ ಅವರ ರಾಜೀನಾಮೆ ನೀಡುವಂತೆ ಹಾಗೂ ಮಧ್ಯ ಪ್ರದೇಶದ ವ್ಯಾಪಂ ಹಗರಣ ಸಂಬಂಧ ಸದನದಲ್ಲಿ ಪ್ರತಿಪಕ್ಷಗಳು ಗದ್ದಲ ಸೃಷ್ಟಿಸುತ್ತಿವೆ.

ಇನ್ನು ಸದನದಲ್ಲಿ ತಮ್ಮ ಹೇಳಿಕೆ ನೀಡಲು ಪ್ರತಿಪಕ್ಷಗಳು ಅವಕಾಶ ನೀಡದ್ದಕ್ಕೆ ಸಚಿವೆ ಸುಷ್ಮಾ ಸ್ವರಾಜ್ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ಸಿಲುಕಿರುವ ಕಾಂಗ್ರೆಸ್ ಹಿರಿಯ ನಾಯಕ ಸಂತೋಷ್ ಬರ್ಗೊಡಿಯಾ ರಾಜತಾಂತ್ರಿಕ ವೀಸಾ ಕೊಡಿಸುವಂತೆ ಒತ್ತಡ ಹೇರಿದ್ದರು ಎಂದು ಸುಷ್ಮಾ ಟ್ವೀಟ್ ಮಾಡಿರುವುದು ಕಾಂಗ್ರೆಸ್ ನಾಯಕರಲ್ಲಿ ತಲ್ಲಣ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com