ಪ್ರಧಾನಿ ಮೋದಿ ಸ್ವೀಕರಿಸಿದ ದುಬಾರಿ ವಿದೇಶಿ ಉಡುಗೊರೆ ೩೫ ಲಕ್ಷದ ಒಡವೆ ಸೆಟ್

ಇಲ್ಲಿಯವರೆಗೂ ಸ್ವೀಕರಿಸಲಾಗಿರುವ ಅತಿ ದುಬಾರಿ ವಿದೇಶಿ ಉಡುಗೊರೆಯನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ ಬಹಿರಂಗಗೊಳಿಸಿದ್ದಾರೆ- ಅದು ೩೫ ಲಕ್ಷ ಬೆಲೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇಲ್ಲಿಯವರೆಗೂ ಸ್ವೀಕರಿಸಲಾಗಿರುವ ಅತಿ ದುಬಾರಿ ವಿದೇಶಿ ಉಡುಗೊರೆಯನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ ಬಹಿರಂಗಗೊಳಿಸಿದ್ದಾರೆ- ಅದು ೩೫ ಲಕ್ಷ ಬೆಲೆ ಬಾಳುವ ಆಭರಣದ ಸೆಟ್.

ಕಳೆದ ತ್ರೈಮಾಸಿಕದಲ್ಲಿ ತೋಶಖಾನ ಎಂದು ಕರೆಯಲಾಗುವು ವಿದೇಶಾಂಗ ಸಚಿವಾಲಯದ ಠೇವಣಿಯಲ್ಲಿ ಜಮಾ ಆದ ವಿದೇಶಿ ಉಡುಗೊರೆಗಳನ್ನು ಪಟ್ಟಿ ಮಾಡಿ ಬಹಿರಂಗಪಡಿಸಲಾಗಿದೆ.

ಆದರೆ ಮೋದಿ ಅವರ ದುಬಾರಿ ವಿದೇಶಿ ಉಡುಗೊರೆ ತಮ್ಮ ಪೂರ್ವದ ಪ್ರಧಾನಿ ಮನಮೋಹಮ್ ಸಿಂಗ್ ಮೇ ೨೦೦೫ ರಲ್ಲಿ ಸ್ವೀಕರಿಸಿದ್ದ ೪೮.೯೩ ಲಕ್ಷದ ಒಡವೆ ಸೆಟ್ ಗಿಂತಲೂ ಸ್ವಲ್ಪ ಕಡಿಮೆ ಮೌಲ್ಯದ್ದೇ. ಮನಮೋಹನ್ ಸಿಂಗ್ ಅವರು ತೋಶಖಾನದಲ್ಲಿ ೨೦.೯೧ ಲಕ್ಷ ಮೌಲ್ಯದ ಖಡ್ಗಗಳ ಜೋಡಿ, ಮೇಜು ಗಡಿಯಾರ ಮತ್ತು ಪೆನ್ನನ್ನು ಕೂಡ ಜಮಾ ಮಾಡಿದ್ದರು.

ವಾಣಿಜ್ಯ ಮತ್ತು ಉದ್ದಿಮೆಗಳ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ವಿದೇಶಿ ಉಡುಗೊರೆಗಳನ್ನು ಸ್ವೀಕರಿಸುವುದರಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನು ಹಿಂದಿಕ್ಕಿದ್ದಾರೆ. ನಿರ್ಮಲಾ ೩೭ ಉಡುಗೊರೆಗಳನ್ನು, ಸುಷ್ಮಾ ೨೭ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ. ನಿರ್ಮಾಲಾ ಅವರಾ ದುಬಾರಿ ಉಡುಗೊರೆ ೧೫೦೦೦ ಮೌಲ್ಯದ ಕಾರ್ಪೆಟ್.

ಸುಷ್ಮಾ ಉಡುಗೊರೆಯ ಸಂಖ್ಯೆಯಲ್ಲಿ ಮೂರನೆ ಸ್ಥಾನದಲ್ಲಿದ್ದರೂ, ಹೆಚ್ಚು ಮೌಲ್ಯದ ಉಡುಗೊರೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಗೆ ೬ ಲಕ್ಷದ ಎರಡು ಕೈಗಡಿಯಾರಗಳು ಉಡುಗೊರೆಯಾಗಿ ಬಂದಿದೆ.

ಸಾಮಾನ್ಯವಾಗಿ ಹೆಚ್ಚು ಮೌಲ್ಯದ ಉಡುಗೊರೆಗಳು ಗಲ್ಫ್ ಮತ್ತು ಭೂತಾನ್ ನಿಂದ ಬರುತ್ತವೆ ಎಂದು ನಂಬಲಾಗಿದೆ. ಪ್ರಧಾನಿ, ಸಚಿವರು ಮತ್ತು ಅಧಿಕಾರಿಗಳು ಸ್ವೀಕರಿಸುವ ವಿದೇಶಿ ಉಡುಗೊರೆಯ ಮೌಲ್ಯ ೪೦೦೦ ರೂಗಳಿಗಿಂತಲೂ ಕಡಿಮೆ ಇದ್ದರೆ ಅದನ್ನು ತೋಶಾಖಾನದಿಂದ ಮನೆಗೆ ಕೊಂಡೊಯ್ಯಬಹುದು ಅಥವಾ ದುಬಾರಿ ಉಡುಗೊರೆಗಳ ನಾಲ್ಕು ಸಾವಿರಕ್ಕಿಂತಲೂ ಮೀರಿದ ಮೌಲ್ಯವನ್ನು ಸರ್ಕಾರಕ್ಕೆ ನೀಡಿ ಉಳಿಸಿಕೊಳ್ಳುವ ಸೌಲಭ್ಯವೂ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com