
ನವದೆಹಲಿ: ಆಧನಿಕ ಜೀವನಶೈಲಿಯ ಫಲವಾದ ಲಿವ್ ಇನ್ ಸಂಬಂಧ ಈಗ ಮತ್ತೆ ಸುದ್ದಿಯಲ್ಲಿದೆ. ಲಿವ್ ಇನ್ ಸಂಬಂಧವನ್ನು ಈಗಾಗಲೇ ಕಾನೂನು ಚೌಕಟ್ಟಿನಲ್ಲಿ ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್, ಲಿವಿಂಗ್ ಟುಗೆದರ್ ಅಪರಾಧವಲ್ಲ ಎಂದು ಗುರುವಾರ ಸ್ಪಷ್ಟಪಡಿಸಿದೆ.
'ಮದುವೆಯಾಗದೇ ಒಂದು ಗಂಡು-ಹೆಣ್ಣು ಒಟ್ಟಿಗೆ ಜೀವನ ಮಾಡುವ ಲಿವ್-ಇನ್-ಸಂಬಂಧವನ್ನು ಈ ಆಧುನಿಕ ಸಮಾಜ ಒಪ್ಪಿಕೊಂಡಿದೆ ಮತ್ತು ಒಪ್ಪಿಕೊಳ್ಳತಕ್ಕದ್ದು. ಅದು ಅಪರಾಧವೇನಲ್ಲ' ಎಂದು ಕೋರ್ಟ್ ಹೇಳಿದೆ.
ಸಾರ್ವಜನಿಕ ಜೀವನದಲ್ಲಿರುವಂತಹ ವ್ಯಕ್ತಿಗಳ ಲಿವ್ ಇನ್ ಸಂಬಂಧವನ್ನು ಬಹಿರಂಗ ಪಡಿಸುವುದು ಮಾನನಷ್ಟವಾಗುವುದಿಲ್ಲವೇ ಎಂಬ ಸರ್ಕಾರದ ಪ್ರಶ್ನೆಗೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಪ್ರಫುಲ್ಲ ಸಿ ಪಂತ್ ನೇತೃತ್ವದ ಪೀಠ ಈ ರೀತಿ ಪ್ರತಿಕ್ರಿಯಿಸಿದೆ.
Advertisement