ಲೈಂಗಿಕ ಕಿರುಕುಳ: ಟೆರಿ ಮುಖ್ಯಸ್ಥ ಆರ್‌ಕೆ ಪಚೌರಿ ವಜಾ

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವಿಶ್ವ ಪ್ರಸಿದ್ಧ ಹವಾಮಾನ ತಜ್ಞ ಡಾ.ಆರ್.ಕೆ.ಪಚೌರಿ ಅವರನ್ನು ಇಂಧನ ಮತ್ತು ಭಾರತೀಯ...
ಆರ್.ಕೆ.ಪಚೌರಿ
ಆರ್.ಕೆ.ಪಚೌರಿ

ನವದೆಹಲಿ: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವಿಶ್ವ ಪ್ರಸಿದ್ಧ ಹವಾಮಾನ ತಜ್ಞ ಡಾ.ಆರ್.ಕೆ.ಪಚೌರಿ ಅವರನ್ನು ಇಂಧನ ಮತ್ತು ಭಾರತೀಯ ಸಂಶೋಧನಾ ಸಂಸ್ಥೆ(ಟಿಇಆರ್‌ಐ)ಯ ಮುಖ್ಯಸ್ಥ ಸ್ಥಾನದಿಂದ ಗುರುವಾರ ವಜಾಗೊಳಿಸಲಾಗಿದೆ.

ಗೌರ್ನಿಗ್ ಕೌನ್ಸಿಲ್ ಪಚೌರಿ ಅವರನ್ನು ವಜಾಗೊಳಿಸಿ ಇಂದು ಆದೇಶ ಹೊರಡಿಸಿದ್ದು, ಅವರ ಸ್ಥಾನಕ್ಕೆ ಅಜಯ್ ಮಾಥೂರ್ ಅವರು ನೇಮಕ ಮಾಡಲಾಗಿದೆ.

ಪ್ರಕರಣ ಸಂಬಂಧ ಮಾರ್ಚ್ 21ರಂದು ನಿರೀಕ್ಷಣಾ ಜಾಮೀನು ನೀಡಿದ್ದ ದೆಹಲಿ ಕೋರ್ಟ್, ಟೆರಿ ಕಚೇರಿ ಆವರಣ ಪ್ರವೇಶಿಸದಂತೆ ಷರತ್ತು ವಿಧಿಸಿತ್ತು. ಆದರೆ ಕಳೆದ ಇತ್ತೀಚಿಗೆ ಕೋರ್ಟ್ ಕಚೇರಿ ಪ್ರವೇಶಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಅವರನ್ನು ವಜಾಗೊಳಿಸಲಾಗಿದೆ.

ನಿರೀಕ್ಷಣಾ ಜಾಮೀನಿನಲ್ಲಿರುವ ಆರ್.ಕೆ.ಪಚೌರಿ, ಲೈಂಗಿಕ ಕಿರುಕುಳ ಕೇಸಿಗೆ ಸಂಬಂಧಪಟ್ಟಂತೆ ಎರಡು ಬಾರಿ ವಿಚಾರಣೆಗೆ ಒಳಗಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com