ಗುಜರಾತ್ ಕೋಮು ಗಲಭೆ ವಿಚಾರಣೆಯಿಂದ ಇಬ್ಬರು ನ್ಯಾಯಾಧೀಶರು ಹೊರಕ್ಕೆ

2002ರ ಗುಜರಾತ್ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ತಮ್ಮನ್ನು ಒಲಿಸಿಕೊಳ್ಳಲು ಯತ್ನಿ ನಡೆಸುತ್ತಿದ್ದಾರೆಂದು ಆರೋಪಿಸಿರುವ ನ್ಯಾಯಾಧೀಶರು ವಿಚಾರಣೆಯನ್ನೇ ಕೈ ಬಿಟ್ಟಿರುವುದಾಗಿ ಗುರುವಾರ...
2002ರ ಗುಜರಾತ್ ಕೋಮು ಗಲಭೆ (ಸಂಗ್ರಹ ಚಿತ್ರ)
2002ರ ಗುಜರಾತ್ ಕೋಮು ಗಲಭೆ (ಸಂಗ್ರಹ ಚಿತ್ರ)

ಅಹ್ಮದಾಬಾದ್: 2002ರ ಗುಜರಾತ್ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ತಮ್ಮನ್ನು ಒಲಿಸಿಕೊಳ್ಳಲು ಯತ್ನಿ ನಡೆಸುತ್ತಿದ್ದಾರೆಂದು ಆರೋಪಿಸಿರುವ ನ್ಯಾಯಾಧೀಶರು ವಿಚಾರಣೆಯನ್ನೇ ಕೈ ಬಿಟ್ಟಿರುವುದಾಗಿ ಗುರುವಾರ ತಿಳಿದುಬಂದಿದೆ.

ಗುಜರಾತ್ ನ ನರೋಡಾ ಪಾಟಿಯಾದಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಆಹ್ಮದಾಬಾದ್ ನ್ಯಾಯಾಲಯವು ಆಗಸ್ಟ್ 29ರಂದು ಭಜರಂಗದಳದ ಮಾಜಿ ಮುಖ್ಯಸ್ಥ ಬಾಬು ಭಜರಂಗಿ, ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡನಾನಿ ಸೇರಿದಂತೆ 32 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿ 29 ಮಂದಿಯನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿತ್ತು.

ಈ ಪ್ರಕರಣ ಸಂಬಂಧ ಕಳೆದವಾರ ನ್ಯಾಯಾಧೀಶರಾದ ಎಂ.ಆರ್.ಶಾ ಮತ್ತು ಕೆ.ಎಸ್. ಜಾವೇರಿ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಅಪರಾಧಿಗಳಿಗೆ ವಿಚಾರಣೆಯಲ್ಲಿ ಮೀಸಲಾತಿ ನೀಡುವಂತೆಯೂ ಹಾಗೆ ಮತ್ತೊಂದು ಪೀಠಕ್ಕೆ ಪ್ರಕರಣವನ್ನು ರವಾನಿಸುವಂತೆ ಆರೋಪಿಗಳ ಪರ ವಕೀಲರು ಆಮಿಷವೊಡ್ಡಿದ್ದರು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಪ್ರಕರಣ ಸಂಬಂಧ ನ್ಯಾಯಾಧೀಶರಿಗೆ ಆಮಿಷವೊಡ್ಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ತಮ್ಮ ಪರವಾಗಿ ನ್ಯಾಯಮಂಡಿಸುವಂತೆ ನ್ಯಾಯಾಧೀಶೆ ಜ್ಯೋತ್ಸ್ನಾ ಯೋಗ್ನಿಕ್ ಅವರಿಗೆ ಜೀವ ಬೆದರಿಕೆ ನೀಡಲಾಗಿತ್ತು. ಹೀಗಾಗಿ ನ್ಯಾಯಾಧೀಶೆ ಜ್ಯೋತ್ಸ್ನಾ ಅವರಿಗೆ ಸರ್ಕಾರ ಜೆಡ್ ಪ್ಲಸ್ ಭದ್ರತೆ ಒದಗಿಸಿತ್ತು. ಆದರೆ, ಸೆಪ್ಟಂಬರ್ ತಿಂಗಳಲ್ಲಿ ಈ ಭದ್ರತೆಯನ್ನು ಸರ್ಕಾರ ಹಿಂಪಡೆದಿತ್ತು. ಹೀಗಾಗಿ ಪ್ರಕರಣವನ್ನು ವಿಚಾರಣೆ ನಡೆಸುವಂತೆ ನ್ಯಾಯಾಧೀಶೆ ಜ್ಯೋತ್ಸ್ನಾ ವಿಶೇಷ ತನಿಖಾ ತಂಡಕ್ಕೆ ನೋಟಿಸ್ ಜಾರಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com