ಪತ್ರಕರ್ತರಿಗೆ 'ಗೃಹ' ನಿರ್ಬಂಧ

ಮಾಧ್ಯಮಗಳಿಗೆ ಮಾಹಿತಿ ನೀಡುವುದನ್ನು ನಿರ್ಬಂಧಿಸಿ ಹೊಸ ಮಾರ್ಗಸೂಚಿ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, ಪತ್ರಕರ್ತರು ಅಧಿಕೃತ ವಕ್ತಾರರನ್ನು...
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Updated on

ನವದೆಹಲಿ: ಮಾಧ್ಯಮಗಳಿಗೆ ಮಾಹಿತಿ ನೀಡುವುದನ್ನು ನಿರ್ಬಂಧಿಸಿ ಹೊಸ ಮಾರ್ಗಸೂಚಿ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, ಪತ್ರಕರ್ತರು ಅಧಿಕೃತ ವಕ್ತಾರರನ್ನು ಹೊರತುಪಡಿಸಿ ಇತರ ಯಾವುದೇ ಅಧಿಕಾರಿಗಳಿಂದ ಮಾಹಿತಿ ಪಡೆಯದಂತೆ ಕಟ್ಟಪ್ಪಣೆ ಹೊರಡಿಸಿದೆ.  

ಮಾಧ್ಯಮಗಳಿಗೆ ಮಾಹಿತಿ ಮತ್ತು ಪ್ರಚಾರ ಸಾಮಗ್ರಿ ನೀಡಲು ಹೆಚ್ಚುವರಿ ಮಹಾ ನಿರ್ದೇಶಕರಿಗೆ(ಮಾಧ್ಯಮ) ಮಾತ್ರ ಅಧಿಕಾರ ನೀಡಲಾಗಿದ್ದು, ಪತ್ರಕರ್ತರ ಯಾವುದೇ ರೀತಿಯ ಸಂದೇಹಗಳಿಗೂ ಅವರೇ ಸ್ಪಷ್ಟನೆ ನೀಡಲಿದ್ದಾರೆ. ಅಗತ್ಯವಿದಲ್ಲಿ ಗೃಹ ಕಾರ್ಯದರ್ಶಿಗಳ ಅನುಮತಿಯೊಂದಿಗೆ ಎಡಿಜಿಯವರು ಮಾಧ್ಯಮಗಳಿಗೆ  ಮಾಹಿತಿ ಕೊಡಲಿದ್ದಾರೆ ಎಂದು  ಸಚಿವಾಲಯದ ಜಂಟಿ ಕಾರ್ಯದರ್ಶಿ ಸತ್ಪಾಲ್ ಚೌಹಾಣ್ ಹೊರಡಿಸಿರುವ ಹೊಸ ಆದೇಶ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com