ಮನೆ ಕೆಲಸದಾಕೆ ಜಗತ್ತಿನ ನಂ.1 ಶ್ರೀಮಂತೆಯಾದಾಗ!

ಅದೃಷ್ಟ ಬಂದದಾರಿಯಲ್ಲೇ ಹಿಂದಿರುಗುವುದು' ಎಂದರೆ ಇದೇ ಇರಬೇಕು! ಅವರಿವರ ಮನೆಯಲ್ಲಿ ಕಸ ಗುಡಿಸುತ್ತಾ, ಮುಸರೆ ತಿಕ್ಕುತ್ತಾ ಬದುಕುವ...
ಊರ್ಮಿಳಾ ಯಾದವ್ (ಸಂಗ್ರಹ ಚಿತ್ರ)
ಊರ್ಮಿಳಾ ಯಾದವ್ (ಸಂಗ್ರಹ ಚಿತ್ರ)
Updated on

ಕಾನ್ಪುರ: `ಅದೃಷ್ಟ ಬಂದದಾರಿಯಲ್ಲೇ ಹಿಂದಿರುಗುವುದು' ಎಂದರೆ ಇದೇ ಇರಬೇಕು! ಅವರಿವರ ಮನೆಯಲ್ಲಿ ಕಸ ಗುಡಿಸುತ್ತಾ, ಮುಸರೆ ತಿಕ್ಕುತ್ತಾ ಬದುಕುವ ಬಡಪಾಯಿಯ ಖಾತೆಗೆ ಒಮ್ಮಿಂದೊಮ್ಮೆಲೇ ರು.95,71,16,98,647 ಜಮೆ ಆದರೆ ಏನಾಗಬೇಡ?

ಆಕೆಗೆ ಹೃದಯಾಘಾತ ಆಗುವುದೊಂದೇ ಬಾಕಿ. ಆದರೆ, ಅದೃಷ್ಟವಶಾತ್ ಉತ್ತರಪ್ರದೇಶದ ಊರ್ಮಿಳಾ ಯಾದವ್ ಈ ಅಚ್ಚರಿಯನ್ನು ನೋಡಿಯೂ ಬದುಕುಳಿದಿದ್ದಾರೆ. ಕೆಲವೇ ಗಂಟೆಗಳವರೆಗೆ ಮನೆಕೆಲಸದ ಹೆಂಗಸೊಬ್ಬಳು ವಿಶ್ವದ ಅತಿ ಶ್ರೀಮಂತ ಮಹಿಳೆಯಾದ ಕಥೆಯಿದು. ಅದೇನೆಂದು ಕೇಳಿ.

ಜನಧನ ಯೋಜನೆಯಡಿ ಊರ್ಮಿಳಾ ಅವರು ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾದ ವಿಕಾಸನಗರ ಶಾಖೆಯಲ್ಲಿ ರು.2 ಸಾವಿರ ಪಾವತಿಸಿ ಖಾತೆ ತೆರೆದಿದ್ದರು. ಇತ್ತೀಚೆಗೆ ಅವರಮೊಬೈಲ್‍ಗೆ ``ನಿಮ್ಮ ಖಾತೆಗೆ ರು.9,99,999 ಜಮೆ ಆಗಿದೆ'' ಎಂಬ ಸಂದೇಶ ಬಂದಿತ್ತು. ಅದಾದ ಕೆಲವೇ ಕ್ಷಣದಲ್ಲಿ ಇನ್ನೊಂದು ಸಂದೇಶದಲ್ಲಿ, ``ನಿಮ್ಮ ಖಾತೆಯಿಂದ ರು.9.97 ಲಕ್ಷಡಿಡಕ್ಟ್ ಮಾಡಲಾಗಿದೆ'' ಎಂದು ಬಂತು. ಊರ್ಮಿಳಾ ಹೌಹಾರಿದಳು.

ಆಕೆಗೆ ಆಗಸವೇ ತಲೆ ಮೇಲೆ ಕಳಚಿ ಬಿದ್ದಂತಾಯ್ತು. ಏನು, ಎತ್ತ ಎಂದುಗೊತ್ತಾಗದೇ ಪರಿಚಿತರೊಬ್ಬರನ್ನು ಕರೆದುಕೊಂಡು ನೇರವಾಗಿ ಬ್ಯಾಂಕಿಗೆ ಹೋದರು. ಅಲ್ಲಿ ಹೋಗಿ ಖಾತೆಯಲ್ಲಿ ಹಣವೆಷ್ಟಿದೆ ಎಂದು ಕೇಳುವಾಗ ಬ್ಯಾಂಕ್ ಸಿಬ್ಬಂದಿ ನೀಡಿದ ಉತ್ತರದಿಂದ ಆಕೆಗೆ ತಲೆಸುತ್ತು ಬಂದಿತ್ತು. ಏಕೆಂದರೆ, ಊರ್ಮಿಳಾ ಖಾತೆಯಲ್ಲಿ ಬರೋಬ್ಬರಿ ರು.95,71,16,98,647 ಇತ್ತು. ಬಾಯಿಬಿಟ್ಟು ಹೇಳಲೂ ಆಗದಷ್ಟು, ಎಣಿಸಲೂ ಆಗದಷ್ಟು ಹಣ ಖಾತೆಗೆ ಬಂದು ಬಿದ್ದಿತ್ತು.

ಬ್ಯಾಂಕ್ ಸಿಬ್ಬಂದಿಯೂ ಹಣವೆಷ್ಟೆಂದು ಲೆಕ್ಕ ಮಾಡಿ ಹೇಳಲಾಗದೇ ತಡವರಿಸಿದರು. ಊರ್ಮಿಳಾ ಅಂತೂ ಕನಸು ಮನಸಿನಲ್ಲೂ ನೋಡಿರದಷ್ಟು ಹಣದ ಬಗ್ಗೆ ಅಂದು ಕೇಳಿದ್ದಳು. ಅಷ್ಟರಲ್ಲಿ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿ, ಇದು ತಮ್ಮಿಂದಾದ ಎಡವಟ್ಟು ಎಂಬುದನ್ನು ಸ್ಪಷ್ಟಪಡಿಸಿದರು. ಇಷ್ಟೆಲ್ಲ ಆದ ಮೇಲೆ ಊರ್ಮಿಳಾ ಹೇಳಿದ ಮಾತೊಂದೇ, ``ಇದೆಲ್ಲ ಹೇಗಾಯ್ತು, ಏನಾಯ್ತು ಎಂದು ನನಗೆ ಬೇಡ. ನನ್ನ ರು.2 ಸಾವಿರ ಸೇಫ್ ಆಗಿದ್ದರೆ ಸಾಕು'' ಎಂದು.!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com