
ಮುಂಬೈ: ಗಲ್ಲು ಶಿಕ್ಷೆಗೆ ಗುರಿಯಾಗಿರುವ ಯಾಕುಬ್ ಮೆಮನ್ ಗೆ ಕ್ಷಮಾದಾನ ನೀಡಬೇಕೆಂದು ಆತನ ಪತ್ನಿ ರಹೀನ್ ಮೆಮನ್ ತಿಳಿಸಿದ್ದಾಳೆ.
ತನ್ನ ಪತಿ ಈಗಾಗಲೇ 20 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಆ ಸಮಯದಲ್ಲಿ ಯಾಕುಬ್ ಮತ್ತು ನಾವು ಬಹಳ ಕಷ್ಟ ಅನುಭವಿಸಿದ್ದೇವೆ. ನಮ್ಮ ಮೇಲೆ ಕರುಣೆ ತೋರಿ ಯಾಕುಬ್ ಮೇಲೆ ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ಬದಲಿಸುವಂತೆ ಸಂಬಂಧಪಟ್ಟವರನ್ನು ನಾವು ಕೋರುತ್ತೇವೆ ಎಂದು ರಹೀನ್ ಮೆಮನ್ ಕೋರಿದ್ದಾಳೆ.
ಮುಂಬೈ ಬಾಂಬ್ ಸ್ಪೋಟದ ನಂತರ ಯಾಕುಬ್ ಶರಣಾಗಿದ್ದಾರೆ. ವಿಚಾರಣೆ ಸಮಯದಲ್ಲಿಯೂ ಅವರು ಸಹಕಾರ ನೀಡಿದ್ದರು. ನಾವು ದೇವರ ಮೇಲೆ ಭಾರ ಹೊತ್ತು ಕುಳಿತಿದ್ದೇವೆ. ನಮಗೆ ಭಾರತ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ ಎಂದು ಹೇಳಿದಳು.
ಯಾಕುಬ್ ಮೆಮನ್ ನ್ನು ಅವನ ಹುಟ್ಟಿದ ದಿನವಾದ ಜುಲೈ 30ರಂದೇ ಗಲ್ಲಿಗೆ ಏರಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಯಾಕುಬ್ ತನಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅದು ನಾಳೆ ವಿಚಾರಣೆಗೆ ಬರಲಿದೆ.
Advertisement