ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುತ್ತೀರಾ? ಅಂಗಾಂಗಗಳನ್ನು ದಾನ ಮಾಡುವುದಕ್ಕೂ ಒಪ್ಪಿಗೆ ಸೂಚಿಸಿ!

ನಿಮಗೆ ವಾಹನ ಚಾಲನೆ ಪರವಾನಗಿ ಬೇಕಾ? ಹಾಗಿದ್ದರೆ ಒಂದು ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟರೆ ನಿಮ್ಮ ಅಂಗಾಗ ಹಾಗೂ ಅಂಗಾಂಶಗಳನ್ನು ದಾನ ಮಾಡಲು ಸಿದ್ಧರಾಗಬೇಕಾಗುತ್ತದೆ.
ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುತ್ತೀರಾ? ಅಂಗಾಂಗಗಳನ್ನು ದಾನ ಮಾಡುವುದಕ್ಕೂ ಒಪ್ಪಿಗೆ ಸೂಚಿಸಿ!

ನವದೆಹಲಿ: ನಿಮಗೆ ಚಾಲನಾ ಪರವಾನಗಿ ಬೇಕಾ? ಹಾಗಿದ್ದರೆ ಒಂದು ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟರೆ ನಿಮ್ಮ ಅಂಗಾಗ ಹಾಗೂ ಅಂಗಾಂಗಗಳನ್ನು ದಾನ ಮಾಡಲು ಸಿದ್ಧರಾಗಬೇಕಾಗುತ್ತದೆ.

ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವಾಗ  ಅಂಗಾಂಗಗಳನ್ನು ದಾನ ಮಾಡುವುದನ್ನು ಕಡ್ಡಾಯಗೊಳಿ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಚಲಾನ ಪರವಾನಗಿ ಪಡೆಯುವುದಕ್ಕೆ ಅಂಗಾಂಗಳನ್ನು ದಾನ ಮಾಡುವುದನ್ನು ಕಡ್ದಯಗೊಳಿಸಬೇಕೆಂಬ ಹೊಸ ನಿಯಮವನ್ನು ಕೇಂದ್ರ ಗೃಹ ಸಚಿವಾಲಯ ರೂಪಿಸಿದೆ ಎಂದು ತಿಳಿದುಬಂದಿದೆ.

15 ನೇ ಲೋಕಸಭೆಯಲ್ಲೇ ಈ ಬಗ್ಗೆ ಚರ್ಚೆ ನಡೆದು ದೀರ್ಘಾವಧಿ ಭರವಸೆಯಾಗಿತ್ತು. 2012 ರ ಡಿ.7 ರಂದು ಸಂಸದರಾದ ಪಿ.ವೇಣೀಗೋಪಾಲ್, ಮಧು ಯಸ್ಕಿ ಗೌಡ ಗೆ ಲಿಖಿತ ಪ್ರತಿಕ್ರಿಯೆ ನೀಡಿದ್ದ ಅಂದಿನ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್,  ಅಂಗಾಂಗಗಳನ್ನು ದಾನ ಮಾಡುವುದನ್ನು ಕಡ್ಡಾಯಗೊಳಿಸುವ ವಿಷಯದ ಬಗ್ಗೆ ಗಮನ ಹರಿಸುತ್ತೇವೆ ಎಂದು ಹೇಳಿದ್ದರು. ಆದರೆ ಈ ವರೆಗೂ ಯಾವುದೇ ಬೆಳವಣಿಗೆಗಳಾಗಿರಲಿಲ್ಲ.

ಸರ್ಕಾರ ಭರವಸೆಗಳ ಕುರಿತಾದ ಸಂಸದೀಯ ಸಮಿತಿ ಮೂರು ವರ್ಷ ಕಳೆದರೂ ಸರ್ಕಾರದ ಭರವಸೆ ಈಡೇರದೇ ಇರುವುದನ್ನು ಗುರುತಿಸಿದೆ. ಕಳೆದ ವರ್ಷ ಅಧಿಕಾರಕ್ಕೆ ಬಂದ ಎನ್.ಡಿ.ಎ ಸರ್ಕಾರದ ಪ್ರತಿನಿಧಿಗಳಿಗೆ ಈಡೇರದೇ ಹಾಗೆಯೇ ಉಳಿದಿರುವ ಭರವಸೆ ಬಗ್ಗೆ ಸಂಸದೀಯ ಸಮಿತಿ ಸದಸ್ಯರು ಮನವರಿಕೆ ಮಾಡಿಕೊಟ್ಟಿದ್ದು ಮೂರು ವರ್ಷಗಳ ಹಿಂದಿನ ಪ್ರಸ್ತಾವನೆಗೆ ಜೀವ ಬಂದಿದೆ.  

ಚಾಲನಾ ಪರವಾನಗಿ ಪಡೆಯುವ ವೇಳೆ ಅಂಗಾಂಗ ದಾನ ಮಾಡುವುದಕ್ಕೆ ಒಪ್ಪಿಗೆ ಸೂಚಿಸುವುದನ್ನು ಕಡ್ಡಾಯಗೊಳಿಸುವುದರಿಂದ ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಪರಿಹಾರವೂ ದೊರೆತಂತಾಗುತ್ತದೆ. ಕೇಂದ್ರ ಸರ್ಕಾರದ ಈ ಕುರಿತು ಅಧಿಸೂಚನೆ ಹೊರಡಿಸಿದರೆ, ಒಂದು ವೇಳೆ ತಾನು ರಸ್ತೆ ಅಪಘಾತದಲ್ಲಿ ಮೃತಪಟ್ಟರೆ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ಪರವಾನಗಿ ಪಡೆದ ವ್ಯಕ್ತಿ ಕಡ್ಡಾಯವಾಗಿ ಒಪ್ಪಿಗೆ ಸೂಚಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com