
ಅಸಾರಾಂ ಬಾಪು ಪರ ಸಾಯಲು ಅಥವಾ ಸಾಯಿಸಲು 2000 ಅನುಯಾಯಿಗಳು ಸಿದ್ಧರಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಕೃಪಾಲ್ ಸಿಂಗ್ ಕೊಲೆ ಆರೋಪಿ ನಾರಾಯಣ ಪಾಂಡೆ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿ ನುಡಿದಿದ್ದ ಕೃಪಾಲ್ ಸಿಂಗ್ ನನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ನಾರಾಯಣ ಪಾಂಡೆಯನ್ನು ಪೊಲೀಸರು ಬಂಧಿಸಿದ್ದರು. ಪಾಂಡೆ ವಿಚಾರಣೆ ವೇಳೆ ಕೆಲ ಆಘಾತಕಾರಿ ಸುದ್ದಿಗಳನ್ನು ಪಾಂಡೆ ನೀಡಿದ್ದು, ಬಾಪು ಪರವಾಗಿ ಯಾರೇ ಸಾಕ್ಷಿ ನುಡಿದರು ಅವರನ್ನು ಹತ್ಯೆ ಮಾಡಲು 2 ಸಾವಿರ ಅನುಯಾಯಿಗಳು ಸರ್ವಸನ್ನದ್ಧರಾಗಿದ್ದಾರೆ ಎಂದು ಹೇಳಿದ್ದಾನೆ.
ತನ್ನ ದುಷ್ಕೃತ್ಯವನ್ನು ಮರೆಮಾಚುವ ಸಲುವಾಗಿ ಪಾಂಡೆ ನಾನು ಕ್ರಿಮಿನಲ್ ಅಲ್ಲ. ನಾನು ಎನೇ ಮಾಡಿದ್ದರು ಅದು ಬಾಪುಜಿಗಾಗಿ. ಪ್ರಕರಣವನ್ನು ಹಿಂತೆಗೆದುಕೊಳ್ಳಲು ಸಂತ್ರಸ್ಥೆ ತಂದೆಗೆ 50 ಲಕ್ಷ ಹಾಗೂ ಸಾಕ್ಷಿ ಕೃಪಾಲ್ ಸಿಂಗ್ ಗೆ 25 ಲಕ್ಷ ಬೇಡಿಕೆಯನ್ನು ಅಸಾರಾಂ ಬಾಪುವಿನ ನಿಕಟವರ್ತಿ ಇಟ್ಟಿದ್ದರು. ಇದಕ್ಕೆ ಒಪ್ಪದಕ್ಕೆ ಕೃಪಾಲ್ ಸಿಂಗ್ ನನ್ನು ಹತ್ಯೆ ಮಾಡಲಾಯಿತು ಎಂದು ನಾರಾಯಣ ಪಾಂಡೆ ಹೇಳಿದ್ದಾನೆ.
ಪಾಂಡೆ ಹೇಳಿಕೆ ಹಿನ್ನೆಲೆಯಲ್ಲಿ ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಸಜ್ಜನ್ ಪುರ ಪೊಲೀಸ್ ವರಿಷ್ಠಾಧಿಕಾರಿ ಬಾಬ್ಲೋ ಕುಮಾರ್ ಹೇಳಿದ್ದಾರೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ 72 ವರ್ಷದ ಅಸಾರಾಂ ಬಾಪು ಇದೀಗ ಸೆರೆಮನೆಯಲ್ಲಿದ್ದಾರೆ.
Advertisement