ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ನೇರಪ್ರಸಾರ ಮಾಡದಿರಲು ಸರ್ಕಾರದ ಆದೇಶ

ಪಂಜಾಬ್ ನ ಗುರ್ದಾಸ್ ಪುರದಲ್ಲಿ ನಡೆಯುತ್ತಿರುವ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ನೇರಪ್ರಸಾದ ಮಾಡದಂತೆ ಆದೇಶ.
ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ(ಸಂಗ್ರಹ ಚಿತ್ರ)
ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ(ಸಂಗ್ರಹ ಚಿತ್ರ)

ನವದೆಹಲಿ: ಪಂಜಾಬ್ ನ ಗುರ್ದಾಸ್ ಪುರದಲ್ಲಿ ನಡೆಯುತ್ತಿರುವ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ನೇರಪ್ರಸಾರ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿ.ವಿ( ಸುದ್ದಿ) ಮಾಧ್ಯಮಗಳಿಗೆ ಸೂಚನೆ ನೀಡಿದೆ.

ಸರ್ಕಾರ ತನ್ನ ಆದೇಶದಲ್ಲಿ 2015 ರ ಕೇಬಲ್ ಟೆಲಿವಿಶನ್ ನೆಟ್ವರ್ಕ್ (ತಿದ್ದುಪಡಿ ಕಾಯ್ದೆ)ಯನ್ನು ಉಲ್ಲೇಖಿಸಿದ್ದು ಭಯೋತ್ಪಾದನೆ  ನಿಗ್ರಹ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡುವುದನ್ನು ನಿರ್ಬಂಧಿಸಿದೆ. ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲು ಸರ್ಕಾರವೇ ಅಧಿಕಾರಿಯೊಬ್ಬರನ್ನು ನೇಮಿಸಿದ್ದು, ಅಧಿಕಾರಿ ನಿಡುವ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ಬಗ್ಗೆ ಮಾಧ್ಯಮಗಳು ಮಾಹಿತಿ ನೀಡಬೇಕಾಗುತ್ತದೆ.

ಆದರೆ ಪಂಜಾಬ್ ನ ಸ್ಥಳಿಯ ಮಾಧ್ಯಮಗಳು ಅಧಿಕಾರಿ ನಿಡುವ ಮಾಹಿತಿಗೆ ಕಾಯದೇ ಕಾಯ್ದೆಯನ್ನು ಉಲ್ಲಂಘಿಸಿ ಕಾರ್ಯಾಚರಣೆಯನ್ನು ನೇರಪ್ರಸಾರ ಮಾಡುತ್ತಿರುವುದು ಗೃಹ ಸಚಿವಾಲಯದ ಗಮನಕ್ಕೆ ಬಂದಿರುವುದರಿಂದ ಸರ್ಕಾರ ಈ ಆದೇಶ ಹೊರಡಿಸಿದೆ.

ಕೇಬಲ್ ಟೆಲಿವಿಶನ್ ನೆಟ್ವರ್ಕ್ (ತಿದ್ದುಪಡಿ ಕಾಯ್ದೆ)ಯನ್ನು ಉಲ್ಲಂಘಿಸಿರುವ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com