ಮದುವೆ ಮನೆಯಲ್ಲಿ ಗುಂಡಿನ ದಾಳಿ: 21 ಸಾವು, 10 ಗಾಯ

ಮದುವೆ ಸಮಾರಂಭದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ 21 ಮಂದಿ ಸಾವನ್ನಪ್ಪಿದ್ದು, 11ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಧಾರುಣ ಘಟನೆ ಈಶಾನ್ಯ ಆಫ್ಘಾನಿಸ್ತಾನದ ಬಘನಲ್ ಪ್ರಾಂತ್ಯದ ಅಂದರ್ಬ್ ಜಿಲ್ಲೆಯಲ್ಲಿ ಭಾನುವಾರ...
ಮದುವೆ ಮನೆಯಲ್ಲಿ ಗುಂಡಿನ ದಾಳಿ: 21 ಸಾವು, 10 ಗಾಯ (ಸಾಂದರ್ಭಿಕ ಚಿತ್ರ)
ಮದುವೆ ಮನೆಯಲ್ಲಿ ಗುಂಡಿನ ದಾಳಿ: 21 ಸಾವು, 10 ಗಾಯ (ಸಾಂದರ್ಭಿಕ ಚಿತ್ರ)

ಕಾಬೂಲ್: ಮದುವೆ ಸಮಾರಂಭದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ 21 ಮಂದಿ ಸಾವನ್ನಪ್ಪಿದ್ದು, 11ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಧಾರುಣ ಘಟನೆ ಈಶಾನ್ಯ ಆಫ್ಘಾನಿಸ್ತಾನದ ಬಘನಲ್ ಪ್ರಾಂತ್ಯದ ಅಂದರ್ಬ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

ಸ್ಥಳೀಯ ಮುಸ್ಲಿಂ ಮುಖಂಡರೊಬ್ಬರ ಮಗನ ಮದುವೆ ಸಮಾರಂಭವನ್ನು ಇಲ್ಲಿನ ಖಾಸಗಿ ಮನೆಯೊಂದರಲ್ಲಿ ಭಾನುವಾರ ರಾತ್ರಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಸುಮಾರು 400ಕ್ಕೂ ಹೆಚ್ಚು ಮಂದಿ ಸೇರಿದ್ದರು. ವೈರತ್ವ ಹೊಂದಿದ್ದ ಎರಡು ಗುಂಪುಗಳೂ ಸಹ ಮದುವೆಗೆ ಆಗಮಿಸಿದ್ದಾರೆ. ಈ ವೇಳೆ ಎರಡುಗಳ ಮಧ್ಯೆ ಸಂಘರ್ಷವೇರ್ಪಟ್ಟಿದೆ. ಜಗಳದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಇದರಿಂದಾಗಿ ಎರಡು ಗುಂಪಗಳ ಸಂಘರ್ಷ ತಾರಕ್ಕೇರಿ ಮದುವೆ ಮನೆಯಲ್ಲೇ ಗುಂಡಿನ ಕಾಳಗ ಪ್ರಾರಂಭಿಸಿದ್ದಾರೆ. ಪರಿಣಾಮ ಮದುವೆ ನೋಡಲು ಬಂದಿದ್ದ ಅತಿಥಿಗಳಲ್ಲಿ 21 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೆ, 11ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಉತ್ತರ ಅಫ್ಘಾನಿಸ್ಥಾನದ ಬಗ್ಲಾನ್‌ ಮತ್ತು ಇತರ ಪ್ರಾಂತ್ಯಗಳಲ್ಲಿ 2001ರಲ್ಲಿ ಅಮೆರಿಕ ನೇತೃತ್ವದ ಸೇನೆಗಳು ಆಕ್ರಮಣ ನಡೆಸಿದ ಬಳಿಕ ತಾಲಿಬಾನ್‌ ಆಳ್ವಿಕೆ ಕೊನೆಗೊಂಡಿತ್ತು. ನಂತರ ದಿನಗಳಲ್ಲಿ ಈ ಪ್ರಾಂತ್ಯಗಳಲ್ಲಿ ನಡೆಯುತ್ತಿರುವ ಗುಂಡಿನ ಕಾಳಗಗಳನ್ನು ಕ್ರಿಮಿನಲ್‌ ಚಟುವಟಿಕೆ ಮತ್ತು ವೈಯಕ್ತಿ ವೈಷಮ್ಯದ ಫ‌ಲ ಎಂದು ಹೇಳುತ್ತಿರುವ ಅಲ್ಲಿನ ಅಧಿಕಾರಿಗಳು ಇಂತಹ ಘಟನೆಗಳನ್ನು ಬಂಡುಕೋರರ ದಾಳಿ ಎಂದು ಮುಚ್ಚಿಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com