
ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರದಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ದಹೆಲಿಯಲ್ಲಿ ಕೆಲ ಹೊತ್ತಿನಲ್ಲೇ ಉನ್ನತ ಮಟ್ಟದ ಸಭೆ ಆರಂಭವಾಗಲಿದ್ದು, ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ) ರಾ ಹಾಗೂ ಗುಪ್ತಚಲ ಇಲಾಖೆಯ ಮುಖ್ಯಸ್ಥರ ಜೊತೆ ಪಂಜಾಬ್ ಪರಿಸ್ಥಿತಿ ಕುರಿತು ರಾಜನಾಥ್ ಸಿಂಗ್ ಚರ್ಚಿಸಲಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, ಉಗ್ರರು ದಾಳಿ ನಡೆಸಿರುವ ಪೊಲೀಸ್ ಠಾಣೆ ಬಳಿಯಿಂದ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದು, ಉಗ್ರರು ಜನರನ್ನು ಒತ್ತೆ ಇರಿಸಿರುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.
ದೀನಾನಗರಪೊಲೀಸ್ ಠಾಣೆಯ ಬಳಿ ಈಗಾಗಲೇ ಹೈಅಲಟ್ ಘೋಷಿಸಲಾಗಿದೆ. ಆದರೆ ಎಷ್ಟು ಜನ ಉಗ್ರರಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಪಂಜಾಬ್ ದೀನನಗರ್ ಪೊಲೀಸ್ ಠಾಣೆಯ ಬಳಿ ಬಿಳಿ ಆಲ್ಟೋ ಕಾರಿನಲ್ಲಿ ಸೇನಾ ಉಡುಪು ಧರಿಸಿ ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ಬಂದ ಬಂದೂಕು ದಾರಿಗಳು ಠಾಣೆ ಸುತ್ತುವರೆದಿದ್ದಾರೆ. ನಂತರ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಇದೀಗ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Advertisement