
ಕಲಾಂ ಅವರ ನಿಧನ ನನಗೆ ತುಂಬಾ ನಷ್ಟವುಂಟು ಮಾಡಿದೆ. ಅವರೊಂದಿಗಿನ ನನ್ನ ಬಾಂಧವ್ಯ ಸದಾ ನೆನಪಿನಲ್ಲಿರುವಂಥದು. ರಾಷ್ಟ್ರಪತಿಯಾಗಿ ಅವರ ಜನಪ್ರಿಯತೆ ಅಪ್ರತಿಮ. ಡಾ. ಕಲಾಂ ಜನರ ರಾಷ್ಟ್ರಪತಿಯಾಗಿದ್ದರು ಮತ್ತು ಮುಂದೆಯೂ ಹಾಗೇ ಇರುತ್ತಾರೆ.
-ಪ್ರಣಬ್ ಮುಖರ್ಜಿ, ರಾಷ್ಟ್ರಪತಿ
ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಕಲಾಂಜೀ ಒಬ್ಬ ನಿಜ ಮಾರ್ಗದರ್ಶಕ. ಅವರೊಂದಿಗಿನ ನನ್ನ ಒಡನಾಟ ಸದಾ ಸ್ಮರಣೀಯ
-ನರೇಂದ್ರ ಮೋದಿ ಪ್ರಧಾನ ಮಂತ್ರಿ
ನನ್ನ ಆತ್ಮೀಯ ಸ್ನೇಹಿತ ಹಾಗೂ ಅದ್ಭುತ ವಿಜ್ಞಾನಿಯೊಬ್ಬರನ್ನು ಕಳೆದುಕೊಂಡು ನಾನು ಬಡವಾಗಿದ್ದೇನೆ. ಅಬ್ದುಲ್ ಕಲಾಂ ಜತೆಗಿನ ನನ್ನ ಸ್ನೇಹ 40 ವರ್ಷದಷ್ಟು ಸುದೀರ್ಘದ್ದು.
- ಸಿ.ಎನ್.ಆರ್.ರಾವ್, ಭಾರತ ರತ್ನ
ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರಕ್ಕೆ ಅಪರಿಮಿತ ಶ್ರಮಿಸಿ ಮಿಸೈಲ್ ಮ್ಯಾನ್ ಎಂದೆನಿಸಿಕೊಂಡಿದ್ದರು. ಮಕ್ಕಳ ಮೇಲೆ ಅಪಾರ ಪೀತಿ ಹೊಂದಿದ್ದರು.
- ಮಲ್ಲಿಕಾರ್ಜುನ ಖರ್ಗೆ
ಲೋಕಸಭೆಯ ವಿಪಕ್ಷದ ನಾಯಕ ಬೆಂಗಳೂರಿಗೆ ಬಂದಾಗ, ಕ್ರಯೋಜೆನಿಕ್ ಎಂಜಿನ್ ಕುರಿತ ಪ್ರಗತಿ ಕಂಡು ಹರ್ಷಿಸಿದ್ದರು. ಬಾಹ್ಯಾಕಾಶದಲ್ಲಿ ಭಾರತ ಸ್ವಾವಲಂಬಿಯಾಗುವ ಕನಸು ಅವರದ್ದು.
- ಎ.ಎಸ್. ಕಿರಣಕುಮಾರ್, ಅಧ್ಯಕ್ಷ ಇಸ್ರೊ
ಯುವಜನತೆಯ ಒಡನಾಡಿ ಹಾಗೂ ಎಲ್ಲ ಮತದ ಜನರನ್ನು ಒಗ್ಗೂಡಿಸುವ ಕೆಲಸದಲ್ಲಿ ಸಕ್ರಿಯರಾಗಿದ್ದ ವ್ಯಕ್ತಿ. ಒಮ್ಮೆ, ನನ್ನೊಂದಿಗೆ ವೀಣೆ ಕೂಡ ನುಡಿಸಿದ್ದರು.
- ಶ್ರೀಶ್ರೀ ರವಿಶಂಕರ ಆರ್ಟ್ ಆಫ್ ಲಿವಿಂಗ್
ಬಡವ, ಶ್ರೀಮಂತ, ಯುವಜನಾಂಗ, ವಯೋವೃದ್ಧರೆನ್ನದೆ ದೇಶದ ಪ್ರತಿಯೊಬ್ಬ ಪ್ರಜೆಯೂ ಇಷ್ಟಪಡುತ್ತಿದ್ದ ವ್ಯಕ್ತಿ ಕಲಾಂ ನಿಧನದಿಂದ ದೇಶಕ್ಕೆ ಅಪಾರ ಹಾನಿ.
-ಅನಂತಕುಮಾರ ಕೇಂದ್ರ ಸಚಿವ
ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಅಬ್ದುಲ್ ಕಲಾಂ ಅವರು ತಮ್ಮ ಮಿಷನ್ ಅನ್ನು ಕೊನೆಯ ಕ್ಷಣದವರೆಗೂ ನಿರ್ವಹಿಸಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಅನುಭವ ಹಂಚಿದ್ದಾರೆ.
-ಎಸ್.ಎಂ. ಕೃಷ್ಣ ಮಾಜಿ ಮುಖ್ಯಮಂತ್ರಿ
ಅವರ ಕೊನೆಯ ಉಸಿರಿನವರೆಗೂ ತಮ್ಮ ದೃಷ್ಟಿಕೋನವನ್ನು ತಾವು ಅತಿಯಾಗಿ ಪ್ರೀತಿಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ. ರಾಷ್ಟ್ರದ ಅತಿ ಶ್ರೇಷ್ಠ ರಾಷ್ಟ್ರಪತಿ ಕಲಾಂ.
-ಪ್ರಹ್ಲಾದ್ ಜೋಶಿ ಬಿಜೆಪಿ ರಾಜ್ಯಾಧ್ಯಕ್ಷ
ಕಲಾಂ ಅವರ ವಿಷನ್-2020ನಲ್ಲಿ ಅವರಿಗೆ ರಾಷ್ಟ್ರದ ಬಗ್ಗೆ ಇದ್ದ ಪ್ರೀತಿ ಮತ್ತು ದೂರದೃಷ್ಟಿ ಪ್ರತಿಫಲವಾಗಿತ್ತು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರಿಂದ ಪ್ರೇರಣೆಗೊಂಡಿದ್ದೆ.
-ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ
ಮಕ್ಕಳಿಗೆ ಪ್ರೀತಿಯ ಕಾರಂಜಿಯಾಗಿ, ಯುವಕರಿಗೆ ಅನುಕರಿಸಬಹುದಾದ ಜ್ಞಾನಪರ್ವತವಾಗಿದ್ದ ಕಲಾಂ ಅವರು ಜನಸಾಮಾನ್ಯರ ರಾಷ್ಟ್ರಪತಿ ಎಂದೇ ಜನಜನಿತರಾಗಿದ್ದರು.
-ಸಿದ್ದರಾಮಯ್ಯ ಮುಖ್ಯಮಂತ್ರಿ
ಕಲಾಂ ಅವರು ಈ ದೇಶ ಕಂಡ ಅಪ್ರತಿಮ ನಾಯಕ. ಪ್ರಾಮಾಣಿಕವಾಗಿ ಹೇಳ್ತೇನೆ, ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.
-ಎಚ್ ಡಿ ದೇವೇಗೌಡ ಮಾಜಿ ಪ್ರಧಾನಿ
ಭಾರತ ರಾಷ್ಟ್ರಪತಿಗಳ ಪರಂಪರೆಗೆ ಘನತೆ, ಹೆಮ್ಮೆ ಮತ್ತು ಜ್ಞಾನದ ಸ್ಪರ್ಶ ನೀಡಿದ ಭಾರತದ ಮಿಸೈಲ್ ಮ್ಯಾನ್ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ರಾಜೀವ್ ಚಂದ್ರಶೇಖರ್ ಸಂಸದ
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ನಿಧನಕ್ಕೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ನಾವು ದೇಶದ ಹೆಮ್ಮೆಯ ನಾಗರಿಕನನ್ನು ಕಳೆದುಕೊಂಡಿದ್ದೇವೆ.
-ಅರುಣ್ ಜೇಟ್ಲಿ ಹಣಕಾಸು ಸಚಿವ
ತನ್ನ ಪ್ರೀತಿ ಮತ್ತು ಬುದ್ಧಿಯಿಂದ ಇಡೀ ದೇಶದ ಹೃನ್ಮನ ಗೆದ್ದಿದ್ದ ಅಪರೂಪದ ವ್ಯಕ್ತಿಯ ಅಗಲಿಕೆ ನನಗೆ ಅಪಾರ ನೋವು ತಂದಿದೆ.
-ರಾಹುಲ್ ಗಾಂಧಿ ಕಾಂಗ್ರೆಸ್ ಉಪಾಧ್ಯಕ್ಷ
ಅವರು ಜ್ಞಾನ ಮತ್ತು ವಿಜ್ಞಾನ ಎರಡರಲ್ಲೂ ಸಾಟಿ ಇಲ್ಲದಂತೆ ಮೆರೆದವರು. ಒಂದು ಕ್ಷಣವೂ ಪೋಲಾಗದಂತೆ ಬದುಕಿದವರು.
-ಡಾ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಧರ್ಮಾಧಿಕಾರಿ
ಕಲಾಂ ಅವರ ನಿಧನದಿಂದ ರಾಷ್ಟ್ರ ನಿಜ ಭಾರತ ರತ್ನವನ್ನು ಕಳೆದುಕೊಂಡಿದೆ. ಅವರ ಸಾವಿನ ಸುದ್ದಿ ನಿಜಕ್ಕೂ ದುಃಖ ತಂದಿದೆ.
-ಅರವಿಂದ ಕೇಜ್ರಿವಾಲ್ ದಿಲ್ಲಿ ಮುಖ್ಯಮಂತ್ರಿ
Advertisement