ರಾಷ್ಟ್ರಪತಿಗಳಿಗೆ ಮತ್ತೊಂದು ಕ್ಷಮಾದಾನ ಅರ್ಜಿ ಸಲ್ಲಿಸಿದ ಯಾಕುಬ್ ಮೆಮನ್

1993 ಮುಂಬೈ ಬಾಂಬ್ ಸ್ಪೋಟದ ಅಪರಾಧಿ ಯಾಕುಬ್ ಮೆಮನ್ ನೇಣಿಗೇರಿಸಲು ಒಂದು ದಿನ ಬಾಕಿ ಇರುವಾಗಲೇ ಯಾಕುಬ್ ಮೆಮನ್...
1993 ಮುಂಬೈ ಬಾಂಬ್ ಸ್ಪೋಟದ ಅಪರಾಧಿ ಯಾಕುಬ್ ಮೆಮನ್
1993 ಮುಂಬೈ ಬಾಂಬ್ ಸ್ಪೋಟದ ಅಪರಾಧಿ ಯಾಕುಬ್ ಮೆಮನ್

ಮುಂಬೈ: 1993 ಮುಂಬೈ ಬಾಂಬ್ ಸ್ಪೋಟದ ಅಪರಾಧಿ ಯಾಕುಬ್ ಮೆಮನ್ ನೇಣಿಗೇರಿಸಲು ಒಂದು ದಿನ ಬಾಕಿ ಇರುವಾಗಲೇ ಯಾಕುಬ್ ಮೆಮನ್ ರಾಷ್ಟ್ರಾಧ್ಯಕ್ಷರಿಗೆ ಮತ್ತೊಂದು ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆಂದು ಬುಧವಾರ ತಿಳಿದುಬಂದಿದೆ.

ಯಾಕುಬ್ ಮೆಮನ್ ಮರಣದಂಡನೆ ಕುರಿತಂತೆ ಈಗಾಗಲೇ ಹಲವು ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಗಲ್ಲು ಶಿಕ್ಷೆಗೆ ತಡೆ ಕೋರಿ ಯಾಕುಬ್ ಮತ್ತೊಂದು ಮೇಲ್ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಯಾಕುಬ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಸುಪ್ರೀಂಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ದ್ವಿಸದಸ್ಯ ಪೀಠ ಒಮ್ಮತದ ತೀರ್ಪು ಪ್ರಕಟಿಸುವಲ್ಲಿ ವಿಫಲವಾಗಿತ್ತು. ಹೀಗಾಗಿ ಈ ಅರ್ಜಿಯ ವಿಚಾರಣೆ ನಡೆಸಲು ಮೂರು ನ್ಯಾಯಾಧೀಶರನ್ನು ಒಳಗೊಂಡ ಹೊಸ ಪೀಠ ರಚಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎಚ್. ಎಲ್. ದತ್ತು ಹೇಳಿದ್ದರು. ಈ ಕುರಿತಂತೆ ನೂತನ ಪೀಠ ಇಂದು ವಿಚಾರಣೆ ನಡೆಸುತ್ತಿದೆ.

ಈಗಾಗಲೇ ಸುಪ್ರೀಂಕೋರ್ಟ್ ನ ಮೂವರು ನ್ಯಾಯಾಧೀಶರು ಯಾಕುಬ್ ಮೆಮನ್ ಗಲ್ಲು ಶಿಕ್ಷೆ ತಡೆ ಕೋರಿ ಹಾಕಿದ್ದ ಅರ್ಜಿಯ ವಿಚಾರಣೆಯನ್ನು ಆರಂಭಿಸಿದ್ದು, ವಿಚಾರಣೆ ವೇಳೆ ಯಾಕುಬ್ ಮೆಮನ್ ಪರ ವಕೀಲ ಆರ್.ರಾಮಚಂದ್ರ ಅವರು ಈ ಹಿಂದೆ ಸುಪ್ರೀಂಕೋರ್ಟ್ ಮೆಮನ್ ಸಲ್ಲಿಸಿದ್ದ ಕ್ಯುರೇಟಿವೇ ಅರ್ಜಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com