
ಮುಂಬೈ: 'ಮುಗ್ಧರನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತಿದೆ' ಎಂದು ಯಾಕೂಬ್ ಮೆಮನ್ ಆಕ್ರೋಶ ವ್ಯಕ್ತಪಡಿಸಿದ್ದನು.
ಹೌದು, ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಗೆ ಮುಂಬೈ ಟಾಡಾ ನ್ಯಾಯಾಲಯ ಗಲ್ಲು ಶಿಕ್ಷೆ ಆದೇಶ ಹೊರಡಿಸಿದಾಗ ಈ ಆಕ್ರೋಶ ಮಾತು ಕೇಳಿ ಬಂದಿತ್ತು. 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಉಗ್ರ ಯಾಕುಬ್ ಮೆಮನ್ಗೆ ಗುರುವಾರ ಬೆಳಗ್ಗೆ 6.30 ವೇಳೆಯಲ್ಲಿ ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಯಿತು.
ಮುಂಬೈನ ಟಾಡಾ ನ್ಯಾಯಾಲಯ 2006 ಸೆಪ್ಟೆಂಬರ್ 12ರಂದು ಯಾಕೂಬ್ ಮೆಮನನ್ನು ಅಪರಾಧಿ ಎಂದು ಹೇಳಿ ಗಲ್ಲು ಶಿಕ್ಷೆ ಆದೇಶ ಹೊರಡಿಸಿತ್ತು. ನ್ಯಾಯಾಲಯದ ತೀರ್ಪು ಪ್ರಕಟವಾಗುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ಯಾಕೂಬ್, ಈಗಾಗಲೇ ಮುಗ್ಧರನ್ನು ಭಯೋತ್ಪಾದಕರೂ ಎಂದು ಕರೆದು 13 ವರ್ಷಗಳು ಕಳೆದುಹೋಗಿದೆ. ನಮ್ಮನ್ನು ಭಯೋತ್ಪಾದಕರನ್ನಾಗೇ ಗುರುತಿಸಲಾಗುತ್ತಿದ್ದು, ಅದರ ಪರಿಣಾಮವನ್ನು ನಾವು ಎದುರಿಸುತ್ತೇವೆ ಎಂದು ಯಾಕೂಬ್ ಹೇಳಿದ್ದನು.
ಬಾಂಬ್ ಸ್ಪೋಟ ಪ್ರಕರಣ ಇತರೆ ಆರೋಪಿಗಳೊಂದಿಗೆ ಸೇರದೆ, ಯಾಕೂಬ್ ಮೆಮನ್ ಪ್ರತ್ಯೇಕವಾಗಿರುತ್ತಿದ್ದನು. ಆದರೆ ನ್ಯಾಯಾಲಯದ ತೀರ್ಪು ಹೊರ ಬೀಳುತ್ತಿದ್ದಂತೆ ತನ್ನ ಭಾವನೆಗಳನ್ನು ತಡೆಯಲಾರದೆ, ಮುಂಬೈ ಸ್ಫೋಟಕ್ಕೆ ನಾನು ಜವಾಬ್ದಾರನಲ್ಲ ಎಂದು ಕಿರುಚಿದ್ದನಂತೆ.
ಮತ್ತೊಂದು ಘಟನೆ ಎದರೆ, ನ್ಯಾಯಾಲಯದ ತೀರ್ಪು ಪ್ರಕಟಣೆಗೆ ಮುನ್ನ ಹೆದರಿಸುವ ರೀತಿಯಲ್ಲಿ ಟಾಡಾ ನ್ಯಾಯಾಲಯದ ನ್ಯಾಯಾಧೀಶ ಜೆಎನ್ ಪಟೇಲ್ ಅವರ ಬಳಿ ಹೋಗಿ, " ಟೈಗರ್ ಹೇಳಿದ್ದು ನಿಜ, ನಾನು ಭಾರತಕ್ಕೆ ಕುಟುಂಬದೊಡನೆ ಹೋಗಬಾರದು, ಅಲ್ಲಿಗೆ ಹೋದರೆ ನಿಮ್ಮನ್ನು ಬೇಟೆಯಾಡುತ್ತಾರೆ ಎಂದು ಹೇಳಿದ್ದ ಮಾತು ನಿಜವಾಯಿತು'' ಎಂದು ಹೇಳಿದ್ದನಂತೆ.
Advertisement