ಗುರುದಾಸ್‌ಪುರದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ, ಹೈಅಲರ್ಟ್ ಘೋಷಣೆ

ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ದೀನಾನಗರ ಪೊಲೀಸ್ ಠಾಣೆಯ ಮೇಲಿನ ದಾಳಿಯ ಘಟನೆ ಮಾಸುವ ಮುನ್ನವೆ ಗುರುದಾಸ್‌ಪುರದ ಬಸ್‌ಸ್ಟಾಂಡ್‌ ...
ಕಳೆದ ಸೋಮವಾರ ಉಗ್ರರೊಂದಿಗೆ ನಡೆದ ಎನ್ ಕೌಂಟರ್ ವೇಳೆ ಭದ್ರತಾ ಸಿಬ್ಬಂದಿ (ಸಂಗ್ರಹ ಚಿತ್ರ)
ಕಳೆದ ಸೋಮವಾರ ಉಗ್ರರೊಂದಿಗೆ ನಡೆದ ಎನ್ ಕೌಂಟರ್ ವೇಳೆ ಭದ್ರತಾ ಸಿಬ್ಬಂದಿ (ಸಂಗ್ರಹ ಚಿತ್ರ)

ಗುರುದಾಸ್‌ಪುರ: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ದೀನಾನಗರ ಪೊಲೀಸ್ ಠಾಣೆಯ ಮೇಲಿನ ದಾಳಿಯ ಘಟನೆ ಮಾಸುವ ಮುನ್ನವೆ ಗುರುದಾಸ್‌ಪುರದ ಬಸ್‌ಸ್ಟಾಂಡ್‌ ಒಂದರಲ್ಲಿ ಗುರುವಾರ ಅನುಮಾನಾಸ್ಪದ ವಸ್ತು ಪತ್ತೆಯಾಗಿ ಆತಂಕ ಮೂಡಿಸಿದೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪಂಜಾಬ್ ಪೊಲೀಸರು ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಅನುಮಾನಾಸ್ಪದ ವಸ್ತುವಿನ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ನಂತರ ಜಿಲ್ಲೆಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ಕಳೆದ ಸೋಮವಾರ ಬೆಳಗ್ಗೆ ಸೈನಿಕರ ವೇಷದಲ್ಲಿ ಆಗಮಿಸಿದ್ದ ಮೂವರು ಉಗ್ರರು, ದೀನಾನಗರ್‌ ಪೊಲೀಸ್‌ ಠಾಣೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದರು. ಉಗ್ರರನ್ನು ಹತ್ತಿಕ್ಕಲು ಸುಮಾರು 12 ತಾಸುಗಳ ಕಾಲ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಓರ್ವ ಎಸ್‌ಪಿ ದರ್ಜೆಯ ಅಧಿಕಾರಿ ಸೇರಿದಂತೆ 7 ಮಂದಿ ಮೃತಪಟ್ಟು, 15 ಮಂದಿ ಗಾಯಗೊಂಡಿದ್ದರು. ಪ್ರತಿದಾಳಿಯಲ್ಲಿ ಎಲ್ಲ ಮೂವರು ಉಗ್ರರನ್ನು ಹತ್ಯೆಗೈಯಲಾಗಿತ್ತು.

ದಾಳಿಯಲ್ಲಿ ಮೃತಪಟ್ಟವರಿಗೆ ಸಂಸತ್‌ನ ಮೇಲ್ಮನೆ ರಾಜ್ಯಸಭೆಯಲ್ಲಿ ಗುರುವಾರ ಶೃದ್ದಾಂಜಲಿ ಸಲ್ಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com