
ನವದೆಹಲಿ: ಹಿಂದು ಭಯೋತ್ಪಾದನೆ ಹೆಸರಲ್ಲಿ ಬಿಜೆಪಿ ದೇಶವನ್ನು ಒಡೆಯಲು ಯತ್ನಿಸುತ್ತಿದೆ, ಎಂದು ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ
'ಲಷ್ಕರ್ ಇ ತಯ್ಬಾಗಿಂತಲೂ ದೇಶಕ್ಕೆ ಹಿಂದು ಭಯೋತ್ಪಾದಕರು ಹೆಚ್ಚು ಅಪಾಯಕಾರಿ, ಎಂದು 2010ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿರುವ ಬಿಜೆಪಿ ತಿರುಗೇಟು ನೀಡಿದೆ.
'ಗೃಹ ಸಚಿವ ರಾಜನಾಥ್ ಸಿಂಗ್ ಸರಕಾರದ ವೈಫಲ್ಯವನ್ನು ಮರೆ ಮಾಚಲು ಹಿಂದು ಭಯೋತ್ಪಾದನೆ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ. ಆ ಮೂಲಕ ಸಮಾಜ ಒಡೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ,' ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಗುಲಾಮ್ ನಬಿ ಆಜಾದ್ ಹೇಳಿಕೆಗೆ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಪ್ರುತ್ಯುತ್ತರ ನೀಡಿದ್ದಾರೆ.
'ಭಯೋತ್ಪಾದನೆ ಬಗ್ಗೆ ಬಿಜೆಪಿ ಕಾಂಗ್ರೆಸ್‌ಗೆ ಪಾಠ ಹೇಳುವ ಅಗತ್ಯವಿಲ್ಲ. ಪಕ್ಷದ ನಾಯಕರಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಆ ಭಯೋತ್ಪಾದಕರಿಂದಲೇ ಹತ್ಯೆಯಾಗಿದ್ದು,' ಎಂದೂ ಆಜಾದ್ ಹೇಳಿದ್ದರು.
'ಭಯೋತ್ಪಾದನೆಗೆ ಯಾವುದೇ ಧಾರ್ಮಿಕ ಬಣ್ಣ ಇರುವುದಿಲ್ಲ. 'ಮುಸ್ಲಿಂ ಭಯೋತ್ಪಾದನೆ' ಎಂಬ ಪದವನ್ನು ಬಳಸದ ಬಿಜೆಪಿ 'ಜಿಹಾದಿ ಭಯೋತ್ಪಾದನೆ' ಎಂದು ಹೇಳುತ್ತದೆ,' ಎಂದ ಪ್ರಸಾದ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರ ಪುತ್ರ ರಾಹುಲ್ ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡಲು ಆಗ್ರಹಿಸಿದ್ದಾರೆ.
Advertisement