ಶೀಘ್ರದಲ್ಲೇ ಭಾರತೀಯ ಮಾರಾಟಕ್ಕೆ ಮ್ಯಾಗಿ: ನೆಸ್ಲೆ ಇಂಡಿಯಾ

ಇನ್‌ಸ್ಟಂಟ್ ನೂಡಲ್ ಮ್ಯಾಗಿಯನ್ನು ಪುನಃ ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ ಶೀಘ್ರದಲ್ಲೇ ತರುತ್ತೇವೆ ಎಂದು ನೆಸ್ಲೆ ಕಂಪನಿಯ ಭಾರತದ ಮುಖ್ಯಸ್ಥ ಸುರೇಶ್ ನಾರಾಯಣನ್ ಹೇಳಿದ್ದಾರೆ...
ಮ್ಯಾಗಿ
ಮ್ಯಾಗಿ

ನವದೆಹಲಿ: ಇನ್‌ಸ್ಟಂಟ್ ನೂಡಲ್ ಮ್ಯಾಗಿಯನ್ನು ಪುನಃ ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ ಶೀಘ್ರದಲ್ಲೇ ತರುತ್ತೇವೆ ಎಂದು ನೆಸ್ಲೆ ಕಂಪನಿಯ ಭಾರತದ ಮುಖ್ಯಸ್ಥ ಸುರೇಶ್ ನಾರಾಯಣನ್ ಹೇಳಿದ್ದಾರೆ.

ವ್ಯವಸ್ಥಾಪಕ ನಿರ್ದೇಶಕ ಎಟಿನೆ ಬೆನೆಟ್ ಬದಲಿಗೆ ಭಾರತದ ಕಾರ್ಯಾಚರಣೆ ಉಸ್ತುವಾರಿ ವಹಿಸಿಕೊಂಡಿರುವ ನಾರಾಯಣನ್ ಡೇರಿ, ಚಾಕೋಲೇಟ್ ಮತ್ತು ಸಿಹಿತಿಂಡಿಗಳ ಕಡೆ ಗಮನಹರಿಸಲಾಗುತ್ತದೆ ಎಂದು ಹೇಳಿದರು.

ಮ್ಯಾಗಿ ನೂಡಲ್ಸ್ ಕುರಿತು ವಿವಾದದ ಬಗ್ಗೆ ನೇರ ಕಾಮೆಂಟ್ ಮಾಡದೇ ನಾವು ಮ್ಯಾಗಿಯನ್ನು ಶೆಲ್ಫ್‌ಗಳಲ್ಲಿ ತರಬೇಕಾಗಿದೆ. ಸದ್ಯಕ್ಕೆ ವಿಷಯ ಕೋರ್ಟ್‌ನಲ್ಲಿದೆ. ಎಲ್ಲವೂ ಅದರ ತೀರ್ಪನ್ನು ಆದರಿಸಿದೆ. ನಾವು ಕಾದುನೋಡೋಣ ಎಂದು ಹೇಳಿದರು.

ಮುಂಬೈ ಹೈಕೋರ್ಟ್ ಸೋಮವಾರ ಮ್ಯಾಗಿ ನಿಷೇಧ ಕುರಿತು ತನ್ನ ತೀರ್ಪನ್ನು ನೀಡುವುದೆಂದು ನಿರೀಕ್ಷಿಸಲಾಗಿದೆ. ಭಾರತದ ಅಧಿಕೃತ ಆಹಾರ ನಿಯಂತ್ರಕವು ಜೂನ್ 5ರಂದು ಮ್ಯಾಗಿಯನ್ನು ನಿಷೇಧಿಸಿತ್ತು. ಅದರ ಮಾದರಿಗಳಲ್ಲಿ ಅಧಿಕ ಪ್ರಮಾಣದ ಸೀಸ ಮತ್ತು ಮಾನೋಸೋಡಿಯಂ ಗ್ಲುಟಾಮೇಟ್ ಇರುವುದು ಕಂಡುಬಂದ ಬಳಿಕ ನಿಷೇಧ ವಿಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com