ಪಂಕಜ ಮುಂಡೆ
ಪಂಕಜ ಮುಂಡೆ

ಮಹಾರಾಷ್ಟ್ರ ಸಚಿವ ಸಂಪುಟ ಸಭೆಗೆ ಗೈರು: ಸಚಿವೆ ಪಂಕಜ ಮುಂಡೆ ನಂಬರ್ 1

ಚಿಕ್ಕಿ ತಿಂದು ಸಿಕ್ಕಿಬಿದ್ದಿದ್ದ ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಪಂಕಜಾ ಮುಂಡೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ..

ಮುಂಬಯಿ: ಚಿಕ್ಕಿ ತಿಂದು ಸಿಕ್ಕಿಬಿದ್ದಿದ್ದ ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಪಂಕಜಾ ಮುಂಡೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಡೆದ ಸತಿವ ಸಂಪುಟ ಸಭೆಗಳಲ್ಲಿ ಗೈರು ಹಾಜರಾದ ನಂಬರ್ ಒನ್ ಸಚಿವೆ ಆಗಿದ್ದಾರೆ.

ಮಾಹಿತಿ ಹಕ್ಕು ಕಾಯಿದೆಯಡಿ ಕಾರ್ಯಕರ್ತ ಅನಿಲ್ ಗಲಗಲಿ ಎಂಬುವರು ಪಡೆದ ಅಂಕಿಅಂಶಗಳಲ್ಲಿ ಇದು ಬಹಿರಂಗವಾಗಿದೆ. ಪಂಕಜ ಮುಂಡೆ ಜೊತೆಗ ಲೋಕೋಪಯೋಗಿ ಸಚಿವ ಏಕನಾಥ್ ಶಿಂಧೆ, ಆರೋಗ್ಯ ಸಚಿವ ದೀಪಕ್ ಸಾವಂತ್ ಹಣಕಾಸು ಸಚಿವ ಸುಧೀರ್ ಮುಂಗಾತಿವರ್ ಕೂಟ ಈ ಪಟ್ಟಿಯಲ್ಲಿದ್ದಾರೆ.

ಡಿಸೆಂಬರ್ 2014 ರಿಂದ 23ನೇ ಜೂನ್ 2015 ರವರೆಗೆ ಒಟ್ಟು 28 ಸಚಿವ ಸಂಪುಟ ಸಭೆ ನಡೆದಿವೆ. ಇದರಲ್ಲಿ ಪಂಕಜ ಮುಂಡೆ 9 ಸಭೆಗಳಿಗೆ ಗೈರಾಗಿದ್ದಾರೆ. ಉಳಿದಂತೆ ಏಕನಾಥ್ ಶಿಂಧೆ-7, ದೀಪಕ್ ಸಾವಂತ್-6, ಸುಧೀಂದ್ರ ಮುಂಗಂತಿವರ್ 5 ಸಚಿವ ಸಂಪುಟ ಸಭೆಗೆ ಗೈರು ಹಾಜಾರಾಗಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ವಿಷಯ ತಿಳಿದು ಬಂದಿದೆ.

ಇನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಜಲ ಸಂಪನ್ಮೂಲ ಸಚಿವ ಬಬನ್ ರಾವ್ ಲೋನಿಕರ್ ನಡೆದ ಎಲ್ಲಾ ಸಭೆಗಳಿಗೂ ಹಾಜರಾಗಿ ಉತ್ತಮ ಟ್ರಾಕ್ ರೆಕಾರ್ಡ್ ಸಂಪಾದಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com