
ಮುಂಬಯಿ: 1993ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಉಗ್ರ ಯಾಕೂಬ್ ಮೆಮನ್ ಪತ್ನಿಗೆ ರಾಜ್ಯಸಭೆಯಲ್ಲಿ ಸದಸ್ಯೆ ಸ್ಥಾನ ನೀಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಮೊಹಮದ್ ಫಾರೂಕ್ ಘೋಶಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಈ ಸಂಬಂಧ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಗೆ ಪತ್ರ ಬರೆದಿದ್ದ ಮೊಹಮದ್ ಫಾರೂಕ್ ತಮ್ಮಪಕ್ಷದಿಂದ ಯಾಕೂಬ್ ಪತ್ನಿ ರಾಹೀನ್ ರನ್ನು ರಾಜ್ಯಸಭಾ ಸದಸ್ಯೆಯನ್ನಾಗಿ ಮಾಡಬೇಕೆಂದು ಬೇಡಿಕೆಯಿಟ್ಟಿದ್ದರು. ಪಕ್ಷದ ಯಾವುದೇ ಮುಖಂಡರ ಜೊತೆ ಸಮಾಲೋಚಿಸದೆ ಮುಲಾಯಂ ಸಿಂಗ್ ಯಾದವ್ ಅವರಿಗೆ ಪತ್ರ ಬರೆದಿದ್ದರು.
ನಾಗಪುರ ಕೇಂದ್ರ ಕಾರಾಗೃಹದಲ್ಲಿ ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಿದ ನಂತರ ಫಾರೂಕ್ ಈ ಪತ್ರ ಬರೆದಿದ್ದರು. ಯಾಕೂಬ್ ಪತ್ನಿ ರಾಹೀನ್ ಮುಗ್ಧೆ ಹಾಗೂ ಅಸಹಾಯಕಿ. ಹಲವು ವರ್ಷಗಳ ಕಾಲ ಆಕೆ ಸೆರೆವಾಸದಲ್ಲಿದ್ದಳು. ಇಂದಿನ ಆಕೆಯ ಸ್ಥಿತಿ ನೋಡಿ ನನಗೆ ಬೇಸರವಾಗಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಸಂಸದ್ ಸದಸ್ಯೆಯನ್ನಾಗಿ ಮಾಡಬೇಕು. ಆ ಮೂಲಕ ಅಸಹಾಯಕರ ಪರ ದನಿ ಎತ್ತುವಂತೆ ಮಾಡಬೇಕು ಎಂದು ಪತ್ರದಲ್ಲಿ ಬರೆದಿದ್ದರು ಎನ್ನಲಾಗಿದೆ.
ಪಕ್ಷದ ರಾಜ್ಯಾಧ್ಯಕ್ಷ ಅಬು ಅಸೀಂ ಅಜ್ಮಿ ಹೇಳಿಕೆ ಬಗ್ಗೆ ವಿವರಣೆ ನೀಡುವಂತೆ ತಿಳಿಸಿದ್ದಾರೆ, ಇನ್ನು ಫಾರೂಕ್ ಹೇಳಿಕೆಗೆಗೂ ಪಕ್ಷದ ನಿಲುವಿಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ,
Advertisement