ಸಂಸತ್‌ನಲ್ಲಿ ಹಿಂದೂ ಭಯೋತ್ಪಾದನೆ ಎಂಬ ಶಬ್ದವನ್ನು ನಾನೆಂದೂ ಬಳಸಿಲ್ಲ: ಶಿಂಧೆ

ಹಿಂದಿನ ಯುಪಿಎ ಸರ್ಕಾರದ ಹಿಂದೂ ಭಯೋತ್ಪಾದನೆ ಪರಿಭಾಷೆ ಪರಿಚಯಿಸಿದ ಕಾರಣ ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟದ ಹಾದಿ ತಪ್ಪಿಸಿ ದುರ್ಬಲಗೊಳಿಸಿದೆ ಎಂಬ ಗೃಹ...
ಸುಶೀಲ್ ಕುಮಾರ್ ಶಿಂಧೆ
ಸುಶೀಲ್ ಕುಮಾರ್ ಶಿಂಧೆ

ಪುಣೆ: ಹಿಂದಿನ ಯುಪಿಎ ಸರ್ಕಾರದ ಹಿಂದೂ ಭಯೋತ್ಪಾದನೆ ಪರಿಭಾಷೆ ಪರಿಚಯಿಸಿದ ಕಾರಣ ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟದ ಹಾದಿ ತಪ್ಪಿಸಿ ದುರ್ಬಲಗೊಳಿಸಿದೆ ಎಂಬ ಗೃಹ ಸಚಿವ ರಾಜನಾಥ್ ಸಿಂಗ್ ಆರೋಪವನ್ನು ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ತಳ್ಳಿಹಾಕಿದ್ದಾರೆ.

ಜೈಪುರದಲ್ಲಿ ನಡೆದಿದ್ದ ಕಾಂಗ್ರೆಸ್‌ ಅಧಿವೇಶನದಲ್ಲಿ ನಾನು ಹಿಂದೂ ಭಯೋತ್ಪಾದನೆ ಶಬ್ದಗಳನ್ನು ಬಳಸಿದ್ದೇನೆ. ಆದರೆ ಸಂಸತ್ತಿನಲ್ಲಿ ನಾನು ಹಿಂದೂ ಭಯೋತ್ಪಾದನೆ ಎಂಬ ಶಬ್ದವನ್ನು ಎಂದೂ ಬಳಸಿಲ್ಲ ಎಂದು ಹೇಳಿದ್ದಾರೆ.

ಗುರುದಾಸ್‌ಪುರ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿನ ತನ್ನ ವೈಫ‌ಲ್ಯವನ್ನು ಮರೆಮಾಚಲು ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿ ಎನ್‌ ಡಿ ಎ ಸರಕಾರ 'ಹಿಂದೂ ಭಯೋತ್ಪಾದನೆ' ಎಂಬ ಪದಗಳನ್ನು ಎಳೆದು ತರುತ್ತಿದೆ ಎಂದು ಶಿಂಧೆ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com