ವಸುಂದರಾ ರಾಜೇ ಮೂರು ದಿನ ದೇವಾಲಯದಲ್ಲಿ ಇದ್ದುದ್ದೇಕೆ...?

ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೇ ಅವರು ಮಧ್ಯಪ್ರದೇಶದ ಪ್ರಸಿದ್ಧ ಮಾ ಪಿತಾಂಬರ ದೇವಾಲಯದಲ್ಲಿ ಮೂರು ದಿನ ವಿಶೇಷ ಪೂಜೆ ಸಲ್ಲಿಸಿದ್ದಾರೆ...
ವಸುಂದರಾ ರಾಜೇ
ವಸುಂದರಾ ರಾಜೇ

ಡಾಟಿಯಾ(ಮಧ್ಯಪ್ರದೇಶ): ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೇ ಅವರು ಮಧ್ಯಪ್ರದೇಶದ ಪ್ರಸಿದ್ಧ ಮಾ ಪಿತಾಂಬರ ದೇವಾಲಯದಲ್ಲಿ ಮೂರು  ದಿನ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೊಠಡಿಯೊಂದರಲ್ಲಿ ಮೂರು ದಿನ ಏಕಾಂಗಿಯಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂಬಿದವರ ಕೈ ಹಿಡಿಯುವ ಹಾಗೂ ಇಷ್ಟಾರ್ಥಗಳನ್ನು ಸಿದ್ಧಿಸುವ ಈ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ಹಲವು ರಾಜಕೀಯ ನಾಯಕರು ಹಾಗೂ ಜನಪ್ರಿಯ ವ್ಯಕ್ತಿಗಳು ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಹೀಗಾಗಿ ಜುಲೈ 29 ರಂದು ದೇವಾಲಯಕ್ಕೆ ತೆರಳಿದ ವಸುಂದರಾ ರಾಜೇ ಜುಲೈ 31 ರವೆರಗೂ ಮಾ ಪಿತಾಂಬರ ದೇವಾಲಯದಲ್ಲೇ ಉಳಿದುಕೊಂಡಿದ್ದರು. ಜುಲೈ 31 ರ ಗುರು ಪೂರ್ಣಿಮೆಯಂದು ವಿಶೇಷ ಪೂಜೆ ಸಲ್ಲಿಸಿದ ನಂತರ ರಾಜಸ್ತಾನಕ್ಕೆ ವಸುಂದರಾ ರಾಜೇ ವಾಪಸಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com