ಪ್ರವಾಸೋದ್ಯಮಕ್ಕಾಗಿ 1100 ದ್ವೀಪಗಳ ಅಭಿವೃದ್ಧಿ: ನಿತಿನ್ ಗಡ್ಕರಿ

ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಮೋದಿ ಸರ್ಕಾರ ಆಸಕ್ತಿ ತೋರುತ್ತಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ 1,100 ದ್ವೀಪಗಳ ಅಭಿವೃದ್ಧಿ ಸೇರಿದಂತೆ 300 ಲೈಟ್ ಹೌಸ್ ನಿರ್ಮಾಣ
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ನವದೆಹಲಿ: ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಮೋದಿ ಸರ್ಕಾರ ಆಸಕ್ತಿ ತೋರುತ್ತಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ 1,100 ದ್ವೀಪಗಳ ಅಭಿವೃದ್ಧಿ ಸೇರಿದಂತೆ 300 ಲೈಟ್ ಹೌಸ್ ನಿರ್ಮಾಣ ಮಾಡುವುದಾಗಿ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಮುಂದಿನ ಎರಡು ಮೂರು ವರ್ಷಗಳಲ್ಲಿ ದೇಶದ 101 ನದಿಗಳನ್ನು ಜಲ ಮಾರ್ಗಗಳನ್ನಾಗಿ ಪರಿವರ್ತಿಸಲು ಸರ್ಕಾರ ಯೋಚಿಸಿದೆ. ಸುಮಾರು 50 ಸಾವಿರ ಕೋಟಿ ವೆಚ್ಚದಲ್ಲಿ ಜಸ ಮಾರ್ಗಗಳ ಅಭವೃದ್ಧಿಗೆ ಚಿಂತನೆ ನಡೆಸಿರುವ ಸರ್ಕಾರ ಮುಂದಿನ ಸಂಸತ್ ಅದಿವೇಶನದಲ್ಲಿ  ಮಸೂದೆ ಅನುಮೋದನೆಗೆ ತರಲಿದೆ ಎಂದರು.

ಮುಂಬರುವ ವರ್ಷಗಳಲ್ಲಿ ದೇಶದ ಜಲಮಾರ್ಗಗಳ ಮೂಲ ಸೌಕರ್ಯ ಅಭಿವೃದ್ಧಿ ಸಂಬಂಧ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುವುದು ಎಂದರು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಭಾಂಗ್ಲಾ ಪ್ರವಾಸದ ವೇಳೆ,  ಎರಡು ದೇಶಗಳು ಜಲಮಾರ್ಗದ ಮೂಲಕ ಸರಕು ಸಾಗಣೆಗೆ ಆಸಕ್ತಿ ತೋರಿರುವುದು ಕಂಡು ಬಂದಿದೆ ಎಂದರು.

ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಜಲ ಮಾರ್ಗಗಳ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು. ಇನ್ನು ಮಹತ್ವದ 5 ರಸ್ತೆ ಯೋಜನೆಗಳ ನಿರ್ಮಾಣಕ್ಕೆ ಬಿಡ್ಡರ್ ಹೆಚ್ಚಿನ ಆಸಕ್ತಿ ತೋರುತ್ತಿರುವುದಾಗಿ ತಿಳಿಸಿದರು.

ಇನ್ನು 101 ನದಿಗಳನ್ನು ಜಲಮಾರ್ಗಗಳನ್ನಾಗಿ ಪರಿವರ್ತಿಸುವ ಸಂಬಂಧ ಸಮಗ್ರ ಯೋಜನಾ ವರದಿಯನ್ನು ಈ ತಿಂಗಳೊಳಗೆ ತಯಾರಿಸುವುದಾಗಿ ಗಡ್ಕರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com