
ಇಸ್ಲಾಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಹಿಡಿದು ತರುವ ವ್ಯಕ್ತಿಗೆ ನೂರು ಕೋಟಿ ರು. ಇನಾಮು ನೀಡುವುದಾಗಿ ಪಾಕ್ ಸಂಸತ್‌ನ ಮೇಲ್ಮನೆ ಸದಸ್ಯ (ಸೆನೆಟರ್) ಸಿರಾಜ್ ಉಲ್ ಹಕ್ ಘೋಷಿಸಿದ್ದಾನೆ.
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿನ ರಾವಲ್‌ಕೋಟ್‌ನಲ್ಲಿ ನಿನ್ನೆ ತನ್ನ ಬೆಂಬಲಿಗರ ಸಭೆಯನ್ನುದ್ದೇಶಿ ಮಾತನಾಡಿದ ಸಿರಾಜ್ ಉಲ್ ಹಕ್, ಪಾಕಿಸ್ತಾನ, ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾನೆ.
ಹಿಜ್ಬುಲ್ ಮುಜಾಹಿದ್ದೀನ್ ನಾಯಕ ಸೈಯದ್ ಸಲಾಹುದ್ದೀನ್’ನನ್ನು ಬಂಧಿಸಲು 50 ಕೋಟಿ ರೂಪಾಯಿ ಘೋಷಣೆ ಮಾಡಿದರೂ ಭಾರತಕ್ಕೆ ಸಾಧ್ಯವಾಗಿಲ್ಲ. 'ನಿಮಗೆ ಮತ್ತು ನಿಮ್ಮ ಏಜೆಂಟ್’ಗಳಿಗೆ ಸಲಾಹುದ್ದೀನ್’ನನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದಿರುವ ಸಿರಾಜುಲ್ ಹಕ್ ನಿಮ್ಮನ್ನು ಬಂಧಿಸಿದವರಿಗೆ ನಾನು 100 ಕೋಟಿ ರೂಪಾಯಿ ಇನಾಮು ನೀಡುತ್ತೇನೆ ಎಂದು ಹೇಳಿದ್ದಾನೆ.
ಕಾಶ್ಮೀರ ಮತ್ತು ಗುಜರಾತ್‌ನಲ್ಲಿನ ಅಪಾರ ಸಾವು ನೋವುಗಳಿಗೆ ಮೋದಿ ಕಾರಣ ಎಂದು ಜಮಾತೆ ಇಸ್ಲಾಮಿ(ಜೆಐ) ಮುಖ್ಯಸ್ಥನೂ ಆದ ಸಿರಾಜುಲ್ ದೂರಿದ್ದಾನೆ. ಈತನ ಪ್ರಚೋದಕ ಭಾಷಣದ ವಿಡಿಯೊ ಸುದ್ದಿ ಚಾನೆಲ್‌ಗಳಲ್ಲಿ ಪ್ರಸಾರವಾಗಿದ್ದು, ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ರ‌್ಯಾಲಿಯಲ್ಲಿ ಕಾಶ್ಮೀರ ಬಿಕ್ಕಟ್ಟು ಪ್ರಸ್ತಾಪಿಸಿದ ಸಿರಾಜುಲ್, ಕಾಶ್ಮೀರ ವಿಮೋಚನೆಕ್ಕೆ ಭಾರತ ಅಡ್ಡಗಾಲು ಹಾಕುತ್ತಿದೆ. ಪಾಕಿಸ್ತಾನಕ್ಕೆ ಭಾರತ ಎಂದಿಗೂ ಒಳ್ಳೆಯ ಗೆಳೆಯನಾಗಲು ಸಾಧ್ಯವಿಲ್ಲ, ಕಾಶ್ಮೀರ ವಿಮೋಚನೆಗೆ ತ್ಯಾಗ ಬಲಿದಾನ ಮಾಡಿದವರ ಬಗ್ಗೆ ಪಾಕಿಸ್ತಾನ ನಾಯಕರು ಕುರುಡರಾಗಿದ್ದಾರೆ ಎಂದು ಟೀಕಿಸಿದ್ದಾರೆ.
Advertisement