ಮ್ಯಾಗಿಗೂ ನನಗೂ ಸಂಬಂಧವಿಲ್ಲ: ಬಿಗ್ ಬಿ ಅಮಿತಾಬ್ ಬಚ್ಚನ್ ಸ್ಪಷ್ಟನೆ

ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ನೆಸ್ಲ್ಟೆ ಕಂಪನಿಯ ಮ್ಯಾಗಿ ನೂಡಲ್ಸ್ ಗೂ ನನಗೂ ಸಂಬಂಧವಿಲ್ಲ, ಎರಡು ವರ್ಷಗಳ ಹಿಂದೆಯೇ ಮ್ಯಾಗಿಯನ್ನು .....
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ಮುಂಬೈ: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ನೆಸ್ಲ್ಟೆ ಕಂಪನಿಯ ಮ್ಯಾಗಿ ನೂಡಲ್ಸ್ ಗೂ ನನಗೂ ಸಂಬಂಧವಿಲ್ಲ, ಎರಡು ವರ್ಷಗಳ ಹಿಂದೆಯೇ ಮ್ಯಾಗಿಯನ್ನು ಬೆಂಬಲಿಸುವುದನ್ನು ನಿಲ್ಲಿಸಿದ್ದೇನೆ ಎಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸ್ಪಷ್ಟನೆ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಮ್ಯಾಗಿ ಜಾಹೀರಾತನ್ನು ಎಂಡಾರ್ಸ್ ಮಾಡುವುದನ್ನು ಬಿಟ್ಟಿರುವುದಲ್ಲದೇ ಇನ್ನೆಂದಿಗೂ ಅದರ ಪ್ರಚಾರದಲ್ಲಿ ಕಾಣಿಸಿಕೊಳ್ಳಬಾರದೆಂದು ನಿರ್ಧರಿಸಿದ್ದಾಗಿ ಸ್ಪಷ್ಟೀಕರಣ ನೀಡಿದ್ದಾರೆ.
ಮ್ಯಾಗಿಯಲ್ಲಿ ಅತ್ಯಧಿಕ ಪ್ರಮಾಣದ ಗ್ಲುಟಮೇಟ್ ಮತ್ತು ಸೀಸ ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮ್ಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಅಮಿತಾಬ್ ಬಚ್ಚನ್, ಪ್ರೀತಿ ಜಿಂಟಾ, ಹಾಗೂ ಮಾಧುರಿ ದೀಕ್ಷಿತ್ ಗೆ  ಹರ್ಯಾಣ ಕೋರ್ಟ್ ನೋಟಿಸ್ ನೀಡಿತ್ತು.

ಮಹಾರಾಷ್ಟ್ರದಲ್ಲಿ ಮ್ಯಾಗಿಗೆ ಕ್ಲೀನ್ ಚಿಟ್: ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ಪರೀಕ್ಷಿಸಿದ ಮ್ಯಾಗಿ ಸ್ಯಾಂಪಲ್ ಗಳಲ್ಲಿ ಅತ್ಯಧಿಕ ಪ್ರಮಾಣದ ಸೀಸ ಇರುವುದು ಪತ್ತೆಯಾಗಿತ್ತು. ಆದರೆ ಮಹಾರಾಷ್ಟ್ರ ನಡೆಸಿದ ಪರೀಕ್ಷೆಯಲ್ಲಿ ಮ್ಯಾಗಿ ಪಾಸ್ ಆಗಿದೆ. ಮ್ಯಾಗಿ ಪರೀಕ್ಷೆಯಲ್ಲಿ ಯಾವುದೇ ಕೆಟ್ಟ ಅಂಶಗಳ ಪತ್ತೆಯಾಗಿಲ್ಲ ಎಂದು ಆಹಾರ ಮತ್ತು ಔಷಧ ಆಡಳಿತ ಮಂಡಳಿ ಆಯುಕ್ತ ಹರ್ಷ ದೀಪ್ ಕಾಂಬ್ಳೆ ತಿಳಿಸಿದ್ದಾರೆ.

ಇನ್ನೂ ಮ್ಯಾಗಿ ತಿನ್ನಲು ಯೋಗ್ಯವಾಗಿದೆ ಎಂದು ಗೋವಾ ಎಫ್ ಡಿಎ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಇದೇ ವೇಳೆ ಕೇರಳದಲ್ಲಿ ನಡೆಸಿದ ಮ್ಯಾಗಿಯಲ್ಲಿ ಅನುಮತಿ ನೀಡಿದ ಮಟ್ಟದಲ್ಲೇ ಸೀಸದ ಪ್ರಮಾಣ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸೈನಿಕರು ಮ್ಯಾಗಿ ತಿನ್ನಬಾರದು ಎಂದು ಸೇನಾ ಮುಖ್ಯಸ್ಥರು ಸೂಚಿಸಿದ್ದಾರೆ. ಮುಂದಿನ ಆದೇಶ ಬರುವವರೆಗೂ ಕ್ಯಾಂಟೀನ್ ನಲ್ಲಿ ಮ್ಯಾಗಿ ಮಾರಾಟ ಮಾಡಬಾರದು ಎಂದು ಸೂಚನೆ ನೀಡಲಾಗಿದೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ :
ಇದೇ ವೇಳೆ ಮ್ಯಾಗಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಜಾಹೀರಾತು ಮೂಲಕ ದಾರಿ ತಪ್ಪಿಸುವವರಿಗೆ ದಂಡ ವಿಧಿಸಲಾಗುವುದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com