ಕರ್ನಾಟಕದ ಇಬ್ಬರು ಸೇರಿ ಐಸಿಸ್ ಪರ ಕಾದಾಡುತ್ತಿದ್ದ ಐವರು ಸಾವು
ನವದೆಹಲಿ: ಐಸಿಸ್ ಉಗ್ರ ಸಂಘಟನೆ ಸೇರಿದಕರ್ನಾಟಕ ಇಬ್ಬರು ಸೇರಿ ಐದು ಮಂದಿ ಮೃತಪಟ್ಟಿದ್ದಾರೆನ್ನುವ ಮಾಹಿತಿ ಭಾರತೀಯ ಗುಪ್ತಚರ ಸಂಸ್ಥೆಗೆ ಸಿಕ್ಕಿದೆ. ಬೆಂಗಳೂರಿನ ಫಯಾಜ್ ಮಸೂದ್, ಭಟ್ಕಳದ ಮಾಜಿ ಸಿಮಿಮುಖಂಡ ಅಬ್ದುಲ್ ಖಾದಿರ್ ಸುಲ್ತಾನ್ ಅರ್ಮರ್ ಸೇರಿ ಒಟ್ಟು ಐದು ಮಂದಿಮೃತಪಟ್ಟಿದ್ದಾರೆ. ಭಾರತದಿಂದ ಒಟ್ಟು 11 ಮಂದಿ ಯುವಕರು ಐಸಿಸ್ ಸೇರ್ಪಡೆಯಾಗಿದ್ದರು. ಇವರಲ್ಲಿ ಮಹಾರಾಷ್ಟ್ರದ ಕಲ್ಯಾಣದ ಆರೀಬ್ ಮಜೀದ್ ವಾಪಸಾಗಿದ್ದರೆ, ಉಳಿದ ಐವರು ಇನ್ನೂ ಐಸಿಸ್ ಪರ ಹೋರಾಟ ನಡೆಸುತ್ತಿದ್ದಾರೆ. ಹೈದರಾಬಾದ್ ನಿಂದ ಲಂಡನ್ ವಿದ್ಯಾರ್ಥಿ ಹನೀಫ್ ವಸೀಂ ಎಂಬಾತ ಕೂಡ ಐಸಿಸ್ ಪರ ಹೋರಾಟದಲ್ಲಿ ಮೃತಪಟ್ಟಿದ್ದಾನೆ ಎನ್ನುವ ಮಾಹಿತಿ ಗುಪ್ತಚರ ಸಂಸ್ಥೆ ಬಳಿ ಇದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಐಸಿಸ್ ಸೇರಿದ 11 ಮಂದಿಯಲ್ಲಿ ಕೆಲವರು ಕೆಲ ಕಾಲಗಲ್ಫ್ ರಾಷ್ಟ್ರಗಳಲ್ಲಿದ್ದರು. ಇವರೆಲ್ಲ ದಕ್ಷಿಣ ಭಾರತಕ್ಕೆ ಸೇರಿದವರು ಎನ್ನುವುದು ಗುಪ್ತಚರದಳದ ಬಳಿ ಇರುವ ಸದ್ಯದ ಮಾಹಿತಿ.ಮೂಲಗಳ ಪ್ರಕಾರ ಐಸಿಸ್ ಪರಹೋರಾಟ ನಡೆಸುತ್ತಿರುವ ಯುವಕರಲ್ಲಿಬಹುತೇಕರು ತಾಯ್ನಾಡಿಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಅವರುತಮ್ಮ ಕುಟುಂಬದ ಜತೆಗೆ ನಿರಂತರ ಸಂಪರ್ಕ ದಲ್ಲಿದ್ದಾರೆ. ಇವರಲ್ಲಿ ಒಬ್ಬ ಉಗ್ರರಿಂದತಪ್ಪಿಸಿಕೊಳ್ಳಲೂ ಪ್ರತ್ನಿಸಿದ್ದನಂತೆ.ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಯುವಜನರು ಐಸಿಸ್‍ನತ್ತ ಆಕರ್ಷಿತರಾಗುತ್ತಿರುವುದರಿಂದ ಭಾರತೀಯ ಗುಪ್ತಚರ ದಳವು ಎಚ್ಚರವಹಿಸಿದೆ. ಐಸಿಸ್ ಪರ ಸಹಾನುಭೂತಿ ಹೊಂದಿರುವ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿದೆ. ಕೆಲತಿಂಗಳಿಂದ ಗುಪ್ತಚರ ದಳವು ದೇಶಾದ್ಯಂತಒಂದಷ್ಟು ಮಂದಿ ಐಸಿಸ್ ಪರ ಸಹಾನೂಭೂತಿಹೊಂದಿರುವವರ ಪಟ್ಟಿ ಮಾಡಿದೆ. ಸಿರಿಯಾದಿಂದ ಈಗಾಗಲೇ ವಾಪಸಾಗಿ ರುವಕಲ್ಯಾಣದ ಯುವಕ ಅಜೀಬ್ ಮಜೀದ್ನಿಂದ ಗುಪ್ತಚರ ಸಂಸ್ಥೆಗಳು ಈಗಾಗಲೇಸಾಕಷ್ಟು ಮಾಹಿತಿ ಕಲೆ ಹಾಕಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ