
ಇಸ್ಲಾಮಾಬಾದ್/ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಭಾರತವನ್ನು ಕೆಣಕುವ ಸಾಹಸ ಮಾಡಿದೆ. ``ಕಾಶ್ಮೀರ ವಿವಾದಿತ ಪ್ರದೇಶ'' ಎಂದು ಪಾಕ್ ಸೇನಾ ಮುಖ್ಯಸ್ಥ ಹೇಳಿದ್ದಾರೆ. ಜತೆಗೆ, ಈ ವಿವಾದವನ್ನು ವಿಶ್ವಸಂಸ್ಥೆಯ ನಿರ್ಣಯದಂತೆ ಪರಿಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪಾಕ್ ಹಾಗೂ ಕಾಶ್ಮೀರವನ್ನು ಪ್ರತ್ಯೇಕಿಸುವುದು ಅಸಾಧ್ಯ. ಕಾಶ್ಮೀರಿಗರ ಆಶಯ ಹಾಗೂ ವಿಶ್ವಸಂಸ್ಥೆಯ ನಿರ್ಣಯದಂತೆ ಕ್ರಮ ಕೈಗೊಂಡಾಗ ಮಾತ್ರ ಈ ಭಾಗದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಐಎಸ್‍ಐನ ಸಾರ್ವಜನಿಕ ಸಂಪರ್ಕಗಳ ಮಹಾ ನಿರ್ದೇಶಕ ಮೇಜರ್ ಜನರಲ್ ಆಸಿಮ್ ಸಲೀಮ್ ಬಜ್ವಾ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಹೇಳಿಕೆಯನ್ನಾಧರಿಸಿ ಟ್ವೀಟ್ ಮಾಡಿದ್ದಾರೆ. ಸೌಹಾರ್ದ ಸಂಬಂಧ ಬೇಕು: ಪಾಕ್ ಸೇನಾ ಮುಖ್ಯಸ್ಥ ಜ.ರಹೀಲ್ಕಾಶ್ಮೀರ ವಿವಾದಿತ ಪ್ರದೇಶ ಎಂದು ವಿವಾದ ಎಬ್ಬಿಸಿದ್ದರೆ ಪ್ರಧಾನಿ ನವಾಜ್ ಷರೀಫ್ ಭಾರತ ಜತೆ ಸೌಹಾರ್ದ ಸಂಬಂಧ ಕಾಯ್ದುಕೊಳ್ಳುವುದು ತಮ್ಮ ಸರ್ಕಾರದ ಆದ್ಯತೆ ಎಂದಿದ್ದಾರೆ. ಆಯಾ ರಾಷ್ಟ್ರಗಳ ಸಾರ್ವಭೌಮತ್ವ ಗಮನದಲ್ಲಿಟ್ಟುಕೊಂಡು 2 ದೇಶಗಳು ಸಂಬಂಧ ಸುಧಾರಿಸಿಕೊಳ್ಳಬೇಕು ಎಂದಿದ್ದಾರೆ ಷರೀಫ್. ಗಡಿ ನಿಯಂತ್ರಣ ರೇಖೆಯಲ್ಲಿ ಕಳೆದ ಮೂರು ದಿನಗಳಿಂದ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನ ಮಂಗಳವಾರವಷ್ಟೇ ಇದಕ್ಕೆ ಭಾರತವೇ ಕಾರಣ ಎಂದು ಆರೋಪಿಸಿತ್ತು.
Advertisement