
ಲಂಡನ್: `ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಮೃತಪಟ್ಟಿದ್ದಾರೆ' ಹೀಗೆಂದು ತಪ್ಪಾಗಿ ಟ್ವೀಟ್ ಮಾಡಿ ಪತ್ರಕರ್ತೆಯೊಬ್ಬರು ವಿವಾದಕ್ಕೆಡೆ ಮಾಡಿದ್ದಾರೆ. ಬಿಬಿಸಿ ಉರ್ದು ಸುದ್ದಿ ವಾಹಿನಿಯ ವರದಿಗಾರ್ತಿ ಅಹ್ಮೆನ್ ಖವಾಜಾ ಅವರೇ ಈ ಟ್ವೀಟ್ ಮಾಡಿದ್ದು, `ಬ್ರೇಕಿಂಗ್: ರಾಣಿ ಎಲಿಜಬೆತ್ ಅವರು ಕಿಂಗ್ ಎಡ್ವರ್ಡ್ 7 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಸಿ ವರ್ಲ್ಡ್ ' ಎಂದು ಕೂಡ ಟ್ವೀಟ್ ಮಾಡಿದ್ದಾರೆ. ಮೊದಲ ಟ್ವೀಟ್‍ನ್ನು ಅಳಿಸಿ ಹಾಕಿದ ಖವಾಜಾ, `ರಾಣಿ ಸತ್ತಿರುವುದು ಹುಸಿ ಸುದ್ದಿಯಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ಮರು ಟ್ವೀಟ್ ಮಾಡಿದ್ದಾರೆ. ನಿಧನವಾರ್ತೆ ಹಾಕುವುದನ್ನು ತಾಂತ್ರಿಕವಾಗಿ ಅಭ್ಯಾಸ ಮಾಡುತ್ತಿದ್ದಾಗ ತಪ್ಪಿ ಬಿಬಿಸಿ ವರದಿಗಾರ್ತಿಯ ಟ್ವಿಟರ್ ಖಾತೆಯಿಂದ ರಾಣಿಯ ನಿಧನ ವಾರ್ತೆ
ಪ್ರಕಟವಾಗಿತ್ತು ಎಂದು ಬಿಬಿಸಿ ವಕ್ತಾರ ತಿಳಿಸಿದ್ದಾರೆ. ಟ್ವೀಟ್‍ಗಳನ್ನು ತಕ್ಷಣವೇ ತೆಗೆದುಹಾಕಲಾಗಿದ್ದು, ನಮ್ಮಿಂದಾದ ತಪ್ಪಿಗೆ ಕ್ಷಮೆ ಯಾಚಿಸುತ್ತೇವೆ ಎಂದು ತಿಳಿಸಿದ್ದಾರೆ. ರಾಣಿ ಎಲಿಜಬೆತ್ ನಿಯಮಿತ ಆರೋಗ್ಯ ತಪಾಸಣೆ ಗಾಗಿ ಆಸ್ಪತ್ರೆ ಗೆ ತೆರಳಿದ್ದರು
ಎಂದು ಬಂಕಿಂಗ್‍ಹ್ಯಾಮ್ ಅರಮನೆ ವಕ್ತಾರತಿಳಿಸಿದ್ದಾರೆ.
Advertisement