ಕೌನ್ಸಿಲರ್ ನಿಂದ ಮಹಿಳೆಯ ಅಪಹರಣ: ಸಿಸಿಟಿವಿಯಿಂದ ಪ್ರಕರಣ ಬಯಲು

ಎನ್ ಸಿಪಿ ಪಾಲಿಕೆ ಸದಸ್ಯ ಆಶಿಶ್ ದಾಮ್ಲೆ ಅವರು ಮಹಿಳೆಯೊಬ್ಬರನ್ನು ಅಪಹರಿಸಿ, ರು. 1 ಲಕ್ಷ ದರೋಡೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ...
ಕೌನ್ಸಿಲರ್ ನಿಂದ ಮಹಿಳೆಯ ಅಪಹರಣ: ಸಿಸಿಟಿವಿಯಿಂದ ಪ್ರಕರಣ ಬಯಲು

ನವದೆಹಲಿ: ಎನ್ ಸಿಪಿ ಪಾಲಿಕೆ ಸದಸ್ಯ ಆಶಿಶ್ ದಾಮ್ಲೆ ಅವರು ಮಹಿಳೆಯೊಬ್ಬರನ್ನು ಅಪಹರಿಸಿ, ರು. 1 ಲಕ್ಷ ದರೋಡೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜೂನ್ 2 ರಂದು ಸಾಧ್ನಾ ಭುವನ್ ಆಶ್ರಮಕ್ಕೆ  20 ರಿಂದ 25 ದರೋಡೆಕೋರರೊಂದಿಗೆ ನುಗ್ಗಿದ ಎನ್ ಸಿಪಿ ಪಾಲಿಕೆ ಸದಸ್ಯ ಆಶೀಶ್ ದಾಮ್ಲೆ, ಆಶ್ರದ ಮೇಲೆ ದಾಳಿ ಮಾಡಿದ್ದಾರೆ. ನಂತರ ಆಶ್ರಮದಲ್ಲಿದ್ದವರೆನ್ನೆಲ್ಲಾ ಬೆದರಿಸಿ, ಓರ್ವ ಮಹಿಳೆಯನ್ನು ಅಪಹರಿಸಿದ್ದಾರೆ. ನಂತರ ಮಹಿಳೆಯ ಬ್ಯಾಗ್ ನಲ್ಲಿದ್ದ 1 ಲಕ್ಷ ರುಪಾಯಿಗಳ ನಗದು ದೋಚಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆಯ ಎಲ್ಲಾ ವಿವರಗಳು ಆಶ್ರಮದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಸ್ತುತ ಸಿಸಿಟಿವಿ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಆಶ್ರಮದ ಮೇಲಿನ ದಾಳಿಯಿಂದ ಆಸ್ತಿಪಾಸ್ತಿ ನಷ್ಟವಾಗಿದ್ದು, ಪ್ರಕರಣ ಕುಲ್ ಗಾವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಶೀಶ್ ದಾಮ್ಲೆ ಅತ್ಯಂತ ಕಿರಿಯ ಸದಸ್ಯರಾಗಿದ್ದು, ಕುಲ್ ಗಾಂವ್ ಮುನ್ಸಿಪಲ್ ಕಾರ್ಪೋರೇಷನ್ ನ ಪಾಲಿಕೆ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಶೀಶ್ ದಾಮ್ಲೆ ಅವರ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕಾನೂನು ಕೈಗೆತ್ತಿ ಕೊಳ್ಳುವ ಹಕ್ಕು ಯಾರಿಗೂ ಇಲ್ಲ. ತಪ್ಪು ಮಾಡಿದವರು ಕಾನೂನು ರೀತಿಯಲ್ಲಿ ಶಿಕ್ಷೆ ಅನುಭವಿಸಲಿದ್ದಾರೆ ಎಂದು ಹೇಳಿದ್ದು, ಆಶೀಶ್ ದಾಮ್ಲೆ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com