
ಕೋಲ್ಕತಾ: 1982ರಲ್ಲಿ ನಡೆದಿದ್ದ ಆನಂದಮಾರ್ಗಿಗಳ ಹತ್ಯೆ ಸಂಬಂಧ 85 ವರ್ಷದ ಸಿಪಿಎಂ ನಾಯಕ ಸೋಮನಾಥ್ ಚಟರ್ಜಿ ಅವರನ್ನು ಶೀಘ್ರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ 2011ರಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆನಂದಮಾರ್ಗಿಗಳ ಹತ್ಯೆ ಪ್ರಕರಣದ ತನಿಖೆ ನಡೆಸಲು ನ್ಯಾ.ಅಮಿತಾವ್‍ಲಾಲ್ ಆಯೋಗವನ್ನು ರಚಿಸಲಾಗಿತ್ತು. ಇತರ ಇಬ್ಬರು ಎಡಪಂಥೀಯ ನಾಯಕರಾದ ಸಮೀರ್
ಪುಟತುಂಡ, ಕಾಂತಿ ಗಂಗೂಲಿ ಅವರ ವಿಚಾರಣೆ ಕೂಡ ನಡೆಯುವ ಸಾಧ್ಯತೆಯಿದೆ.
ಸಮೀರ್ ಪುಟತುಂಡ 2001ರಲ್ಲಿ ಸಿಪಿಐ ತ್ಯಜಿಸಿ ತಮ್ಮದೇ ಸ್ವಂತ ಪಕ್ಷವನ್ನು ಆರಂಭಿಸಿದ್ದರು. 1982ರ ಏಪ್ರಿಲ್ 30ರಂದುಸಿಪಿಎಂಗೆ ಸೇರಿದ ಗುಂಪೊಂದುಆನಂದಮಾರ್ಗಿಗಳ ಮೇಲೆ ಹಲ್ಲೆ ನಡೆಸಿ 17 ಮಂದಿಯನ್ನು ಜೀವಂತ ದಹನ ಮಾಡಿದ್ದರು.
Advertisement