ಮಲೇಷ್ಯಾದ ಬೊರ್ನಿಯೊ ದ್ವೀಪದಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲು

ಮಲೇಷಿಯಾದ ಬೊರ್ನಿಯೊ ದ್ವೀಪದಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 6.0 ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ...
ಮಲೇಷ್ಯಾದ ಬೊರ್ನಿಯೊ ದ್ವೀಪದಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲು
ಮಲೇಷ್ಯಾದ ಬೊರ್ನಿಯೊ ದ್ವೀಪದಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲು

ಕೌಲಾಲಂಪುರ: ಮಲೇಷಿಯಾದ ಬೊರ್ನಿಯೊ ದ್ವೀಪದಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 6.0 ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಭೂ ತಜ್ಞರ ಸಮೀಕ್ಷೆ ಪ್ರಕಾರ ಭೂಕಂಪದ ಕೇಂದ್ರ ಬಿಂದು ರನಾವು ನಗರದ ಕೊಟಾ ಕಿನಾಬಲು ಜಿಲ್ಲೆಯೆಂದು ತಿಳಿದುಬಂದಿದ್ದು, ಸಾವು ನೋವುಗಳಾಗಿರುವ ಕುರಿತಂತೆ ಈ ವರೆಗೂ ಯಾವುದೇ ವರದಿಯಾಗಿಲ್ಲ.

ಮಲೇಶಿಯಾದಲ್ಲಿ ಈ ವರೆಗೂ ಈ ರೀತಿಯ ಭೂಕಂಪನದ ಯಾವುದೇ ಅನುಭವವಾಗಿರುವಂತೆ ವರದಿಯಾಗಿಲ್ಲವಾದರೂ, ಮಲೇಶಿಯಾದ ಸುತ್ತಮುತ್ತಲಿನ ಪೆಸಿಫಿಕ್ ಸಾಗರದ ಬಳಿ ಭೂಕಂಪನದ ಅನುಭವವಾಗಿತ್ತಿರುವುದಾಗಿ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com