
ಶ್ರೀನಗರ: ಅಕ್ರಮವಾಗಿ ಭಾರತದ ಗಡಿ ನಸುಳಲು ಯತ್ನಿಸುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನಾ ಪಡೆ ಹತ್ಯೆಗೈದಿರುವ ಘಟನೆ ಜಮ್ಮು ವಿನ ಕುಪ್ವಾರ ಜಿಲ್ಲೆಯ ಟುಟ್‌ಮಾರ್ ಗಲಿ ಪ್ರದೇಶದಲ್ಲಿ ನಡೆದಿದೆ.
ಉಗ್ರರು ಅಕ್ರಮವಾಗಿ ಗಡಿ ನುಸುಳಲು ಯತ್ನಿಸುತ್ತಿದ್ದ ವೇಳೆ ಸೇನಾ ಪಡೆ ದಾಳಿ ನಡೆಸಿ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಕಳೆದ ಎರಡು ವಾರಗಳಿಂದ ಇದು ಮೂರನೇ ಗಡಿ ನುಸುಳುವಿಕೆ ಯತ್ನವನ್ನು ಭಾರತೀಯ ಸೇನಾ ಪಡೆ ವಿಫಲಗೊಳಿಸಿದೆ. ಮೇ 25 ರಂದು ತಾಂಗ್‌ದಾರ್ ವಲಯದಲ್ಲಿ ಗಡಿ ನುಸುಳುತ್ತಿದ್ದ ನಾಲ್ವರು ಉಗ್ರರನ್ನು ಸೇನಾ ಪಡೆ ಹತ್ಯೆಗೈದಿತ್ತು,
Advertisement