ಅರುಣಾಚಲಪ್ರದೇಶದಲ್ಲಿ ಸತತ ಮಳೆ- ಭೂಕುಸಿತ, ಅಪಾರ ಹಾನಿ

ಅರುಣಾ ಚಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಭೂಕುಸಿತವುಂಟಾಗಿದೆ....
ಭೂಕುಸಿತದಿಂದ ಉಂಟಾದ ಹಾನಿ
ಭೂಕುಸಿತದಿಂದ ಉಂಟಾದ ಹಾನಿ

ಇಟಾನಗರ್: ಅರುಣಾ ಚಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಭೂಕುಸಿತವುಂಟಾಗಿ ಅನೇಕ ಮನೆಗಳಿಗೆ ಹಾನಿಯಾಗಿದೆ.  ಕಳೆದ 24 ಗಂಟೆಗಳಲ್ಲಿ ಸುಮಾರು 100 ಮಿಲಿಮೀಟರ್ ಮಳೆಯಾಗಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.

ಭೂಕುಸಿತದಿಂದಾಗಿ ನಿಯಾ ಕಾಲೋನಿಯಲ್ಲಿ ಅನೇಕ ಮನೆಗಳು ಕುಸಿದು ಬಿದ್ದಿವೆ. ರಾಷ್ಟ್ರೀಯ ಹೆದ್ದಾರಿ 52 ಸೇರಿದಂತೆ ಇಟಾ ನಗರ್ ಹಾಗೂ ಕರಿಂಗಶ್ ನಗರದಲ್ಲೂ ಕೂಡ ಹಲವು ಮನೆಗಳು ಹಾನಿಗೊಳಗಾಗಿವೆ,  ಪ್ರಮುಖ ರಸ್ತೆಗಳ ಸಂಪರ್ಕ ಕಡಿದು ಹೋಗಿದೆ. ಭೂ ಕುಸಿತದಿಂದ ಸಂಚಾರ ಸ್ಥಗಿತಗೊಂಡಿದ್ದು, ತೆರವುಗೊಳಿಸಲು ರಕ್ಷಣಾ ಪಡೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಮಣ್ಣಿನೊಳಗೆ 5 ವಾಹನಗಳು ಹೂತುಹೋಗಿದ್ದು ಸುಮಾರು 57 ಮನೆಗಳು ಕುಸಿದು ಬೀಳುವ ಆತಂಕದಲ್ಲಿವೆ. ಇನ್ನು ಜೂನ್ 7 ರಿಂದ 11 ರವರೆಗೆ ಮಳೆ ಮುಂದುವರಿಯಲಿದೆ ಎಂದು ಇಟಾನಗರ ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com