ವೋಟಿಗಾಗಿ ಲಂಚ: ವಿವಾದದ ಕೇಂದ್ರ ಬಿಂದುವಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ತೆಲುಗುದೇಶಂ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶಾಸಕ ಎಲ್ವಿಸ್‌ ಸ್ಟೀಫ‌ನ್ಸನ್‌...
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು

ಹೈದರಾಬಾದ್‌: ತೆಲುಗುದೇಶಂ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶಾಸಕ ಎಲ್ವಿಸ್‌ ಸ್ಟೀಫ‌ನ್ಸನ್‌ ಎಂಬುವರಿಗೆ ದೂರವಾಣಿ ಮೂಲಕ ಆಮಿಷವೊಡ್ಡಿದ್ದಾರೆ ಎನ್ನುವ ಆಡಿಯೋ ಟೇಪ್ ವೊಂದು ಬಹಿರಂಗವಾಗಿದ್ದು, ಆಂಧ್ರ ರಾಜಕೀಯ ವಲಯದಲ್ಲಿ ಬಿರುಗಾಳಿ ಎದ್ದಿದೆ.

ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷದ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಆದರೆ, ಈ ಖುಷಿಯಲ್ಲಿ ಸಂಭ್ರಮಿಸುವ ಅವಕಾಶವನ್ನು ಸಿಎಂ ಚಂದ್ರಬಾಬುನಾಯ್ಡು ಕಳೆದುಕೊಂಡಿದ್ದಾರೆ. ಚಂದ್ರಬಾಬು ನಾಯ್ಡು ವೋಟಿಗಾಗಿ ನೋಟು ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ.

ಆಡಿಯೋ ಟೇಪ್‌ನಲ್ಲಿ ಇರುವ ಧ್ವನಿ ನಾಯ್ಡು ಅವರದ್ದೇ ಎಂಬುದು ದೃಢಪಟ್ಟಿಲ್ಲ. ಆಡಿಯೋ ಟೇಪ್‌ ಬಹಿರಂಗವಾಗುತ್ತಿದ್ದಂತೆ ಚಂದ್ರಬಾಬು ನಾಯ್ಡು ಅವರು ಉನ್ನತ ತುರ್ತು ಸಭೆ ನಡೆಸಿದ್ದಾರೆ. ಇದೊಂದು ಸುಳ್ಳು ಆಡಿಯೋ ಟೇಪ್‌ ಎಂದು ಕಿಡಿಕಾರಿದ್ದಾರೆ. ಆಡಿಯೋ ಟೇಪ್‌ನಲ್ಲಿರುವ ಧ್ವನಿ ನಾಯ್ಡು ಅವರದ್ದಲ್ಲ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಆಂಧ್ರ ಸರ್ಕಾರದ ಸಲಹೆಗಾರ ಪರಕಾಲ ಪ್ರಭಾಕರ್‌ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com